ಕ್ರಾಂತಿಕಾರಿ ಸಂತ ಪೂಜ್ಯ 108 ಮುನಿಶ್ರೀ ಪ್ರಸಂಗ ಸಾಗರ ಮಹಾರಾಜರು ಧರ್ಮಪ್ರಚಾರಕ್ಕೋಸ್ಕರ ಶುಕ್ರವಾರ ಸಂಜೆ ಬಂಟ್ವಾಳ ಪುರಪ್ರವೇಶ ಮಾಡಿದರು.
ಶ್ರವಣಬೆಳಗೊಳದಿಂದ ಹೊರಟ ಅವರು ವೇಣೂರು, ಅಜ್ಜಿಬೆಟ್ಟು ಬಸದಿ, ಪಂಜಿಕಲ್ಲು ಮನೆ ಮತ್ತಿತರೆಡೆ ತೆರಳಿ ಬಳಿಕ ಬಂಟ್ವಾಳ ಪೇಟೆಯಲ್ಲಿರುವ ಜೈನ ಬಸದಿಗೆ ಶುಕ್ರವಾರ ಸಂಜೆ ಪುರಪ್ರವೇಶ ಮಾಡಿದರು. ಈ ಸಂದರ್ಭ ಸುದರ್ಶನ ಜೈನ್, ಸುಭಾಶ್ಚಂದ್ರ ಜೈನ್, ನಿರಂಜನ ಇಂದ್ರ ಪಾಣೆಮಂಗಳೂರು, ಅರ್ಕಕೀರ್ತಿ ಇಂದ್ರ ಸಿದ್ಧಕಟ್ಟೆ, ಯುವರಾಜ ಆಳ್ವ ವಾಮದಪದವು, ವೃಷಭರಾಜ ಇಂದ್ರ ಅಜ್ಜಿಬೆಟ್ಟು, ಆದಿರಾಜ ಜೈನ್ ವಗ್ಗ, ಭರತ್ ರಾಜ್ ಜೈನ್ ಪಾಪುದಡ್ಕ, ಪ್ರವೀಣ್ ಜೈನ್ ವೇಣೂರು, ಸುದೀಪ್ ಸಿದ್ಧಕಟ್ಟೆ, ಅರುಣ್ ಕುಮಾರ್ ಇಂದ್ರ ಅಜ್ಜಿಬೆಟ್ಟು, ಹರ್ಷರಾಜ್ ಜೈನ್, ಅನಿಲ್ ವರ್ಮ ಸಹೋದರರು ಅಲ್ಲಿಪಾದೆ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಜೈನ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು. ಶನಿವಾರ ಪಾಣೆಮಂಗಳೂರು ಪ್ರವೇಶ, ಭಾನುವಾರ ಪಾಣೆಮಂಗಳೂರು ಬಸದಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ೧೯ಕ್ಕೆ ಮಂಗಳೂರು ಪುರಪ್ರವೇಶ ಮಾಡುವರು.
Be the first to comment on "108 ಮುನಿಶ್ರೀ ಪ್ರಸಂಗಸಾಗರ ಮಹಾರಾಜ್ ಪುರಪ್ರವೇಶ"