ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮತ್ತು ಉದ್ಯಮಿ ಸುನೀತ್ ಕಿಶನ್ ಅವರು ಇತ್ತೀಚೆಗೆ ನಿಧನರಾದ ಶ್ರೀಧರ ಗೌಡ ಅವರ ಪತ್ನಿ ಭವಾನಿ ಅವರಿಗೆ 31 ಸಾವಿರ ರೂ. ವಿಮೆ ವಿತರಿಸಿದರು.
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ನಡೆಸಿಕೊಂಡುಬರುತ್ತಿರುವ ಆಮ್ ಆದ್ಮಿ ವಿಮಾ ಯೋಜನೆ ಸದಸ್ಯರಾಗಿದ್ದ ಶ್ರೀಧರ ಗೌಡ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಪತ್ನಿಗೆ ವಿಮೆ ಮೊತ್ತ ನೀಡಲಾಯಿತು.
ಈ ಸಂದರ್ಭ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಪುದು ಪಂಚಾಯತ್ ಸದಸ್ಯ ಎಂ.ಕೆ. ಖಾದರ್, ಪ್ರಶಾಂತ್ ಕುಮಾರ್ ತುಂಬೆ, ಸೇವಾಂಜಲಿ ಕಾರ್ಯಕರ್ತೆ ಹರಿಣಾಕ್ಷಿ ಕೆ., ಯಮುನಾ, ಆರ್.ಎಸ್. ಜಯ ರಾಮಲ್‌ಕಟ್ಟೆ, ಮೋಹನ್ ಸಾಲ್ಯಾನ್ ಬೆಂಜನಪದವು ಉಪಸ್ಥಿರಿದ್ದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಮಾ ಪರಿಹಾರ ವಿತರಣೆ"