ತುಳುವರ ಹಿರಿಮೆ ತಮಿಳು ಸಾಹಿತ್ಯದಲ್ಲಿ

ಪಂಚ ದ್ರಾವಡ ಭಾಷೆಗಳಲ್ಲಿ ಹಿರಿಯ ಭಾಷೆ ತುಳು. ಸುಮಾರು 25ಕ್ಕೂ ಹೆಚ್ಚು ಸಮುದಾಯಗಳ ಸಂಪರ್ಕ ಭಾಷೆ ತುಳು. 12-16ನೇ ಶತಮಾನಗಳ ತುಳು ಲಿಪಿ ತುಳು ಭಾಷೆಯ ಲಿಖಿತ ಕಾವ್ಯಗಳಿಂದ ಮತ್ತು 1ನೇ ಶತಮಾನದಿಂದ ತುಳು ಲಿಪಿ ತುಉ ಭಾಷೆ ಶಾಸನಗಳಿಂದ ಈ ಭಾಷೆ ಸಮೃದ್ಧವಾಗಿದೆ.

ಚಂದ್ರಗಿರಿಯಿಂದ ಗೋಕರ್ಣವರೆಗೆ ತುಳುನಾಡೆಂಬ ಪಾಡ್ದನಗಳ ಹೇಳಿಕೆಗಳನ್ನು ಐತಿಹಾಸಿಕ ದಾಖಲೆಗಳು ಪುಷ್ಟಿ ನೀಡುತ್ತವೆ. ತುಳುನಾಡಲ್ಲಿ ಸಂಶೋಧನೆಗೊಂಡ ಆದಿಮಾನವನ ನೆಲೆಗಳು ಗೋರಿಗಳು ಇಲ್ಲಿಯ ಮಾನವನ ಚಟುವಟಿಕೆಯನ್ನು ಶಿಲಾಯುಗಕ್ಕೆ ಕೊಂಡೊಯ್ದರೆ, ಬುದ್ಧನ ಜಡ್ಡಿನ ನಂದಿ, ನಂದಿನಿ ಮಂಡಲದ ಸಂಶೋಧನೆ ತುಳುನಾಡ ಮಾನವನ ಸಾಂಸ್ಕೃತಿಕ ಬದುಕಿನ ಹರವನ್ನು ಕ್ರಿ.ಪೂ.1500 ವರ್ಷಗಳೀಚೆಗೆ ಒಯ್ಯುತ್ತದೆ. ಕ್ರಿ.ಶ.ಆರಂಭದಲ್ಲೇ ಕರಾವಳಿ ಕರ್ನಾಟಕಕ್ಕೆ ತುಳುನಾಡೆಂಬ ಹೆಸರಿದ್ದು, ತುಳುಆಡಲ್ಲಿ ಕೋಶರ್ ಎಂಬ ನಿವಾಸಿಗಳಿದ್ದು, ಅವರನ್ನು ತುಳುವರೆಂದು ತಮಿಳು ಸಂಘ ಸಾಹಿತ್ಯ ಲ್ಲೇಖ ಮಾಡುತ್ತದೆ. 2000 ವರ್ಷಗಳಿಂದಲೂ ಇದಕ್ಕೆ ತುಳುನಾಡೆಂದು ಹೆಸರಿಸಿದ್ದು, ಅದಕ್ಕೆ ಮಧುರೈ ಕಾಂಚಿ ಎಂಬ 2-3ನೇ ಶತಮಾನದ ತಮಿಳು ಕಕಾವ್ಯದಲ್ಲಿ ತುಳು ಕೋಶವನ್ನು ನಾನೋಲ್ ಕೋಶ ದರೆ ನಾಲ್ಕು ಭಾಷೆಗಳನ್ನು ಬಲ್ಲವರೆಂದು ಹೇಳಲಾಗಿದೆ.

ತಮಿಳು, ಕನ್ನಡ, ತೆಲುಗು, ತುಳು ನಾಲ್ಕು ಭಾಷೆಗಳೇ ಅದು ಎಂದು ಹೇಳಲಾಗಿದೆ ಸೌಂದರ್ಯದ ಸಿರಿ ಸಂಪತ್ತಿನ ತುಳುನಾಡಿನ ವರ್ಣನೆಯನ್ನು ಮಾಮುಲನಾರ್ ಮಾಡುತ್ತಾನೆ. ಶ್ರೇಷ್ಠ ಬಿಲ್ಲಾಳುಗಳು ಎಂದು ಸತ್ಯ ಸಂಧರೆಂದು ಸಂಘ ಸಾಹಿತ್ಯದಲ್ಲಿ ತುಳುವರ ಬಗ್ಗೆ ಮೆಚ್ಚುಗೆಯ ಮಾತುಗಳಿವೆ. ತುಳುನಾಡಿನಲ್ಲಿ ರಥಿ ಮಹಾರಥಿಗಳ ಯುದ್ಧ ಕೌಶಲ್ಯದ ಮಹಾಸೇನೆ ಇರುವುದು ಎಂದು ತಮಿಳುನಾಡ ಪಾಂಡ್ಯ ಚಕ್ರವರ್ತಿ ಕೊಚ್ಚಡೈಯನ್ ನ ಮೊಮ್ಮಗ ಜಟಿಲ ಪರಾಂತಕನ ಕ್ರಿ.ಶ. 700-730ರ ವೇಳ್ವಿಕುಡಿ ತಾಮ್ರಶಾಸನದಲ್ಲಿ ಉಲ್ಲೇಖವೇ ಇದೆ.

About the Author

B Thammayya
ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Be the first to comment on "ತುಳುವರ ಹಿರಿಮೆ ತಮಿಳು ಸಾಹಿತ್ಯದಲ್ಲಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*