ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇರಾ ತಾಳಿತ್ತಬೆಟ್ಟು ಇಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುವ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಫೆಬ್ರವರಿ 7 ರಂದು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇರಾ ತಾಳಿತ್ತಬೆಟ್ಟು ಇಲ್ಲಿ ಚಾಲನೆ ನೀಡಲಾಯಿತು.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಲಸಿಕಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುರಳೀಧರ ಭಂಡಾರಿ, ಎಸ್.ಡಿ.ಎಂ.ಸಿ ಸದಸ್ಯರಾದ ಮೊಯಿದಿನ್ ಕುಂಞ, ಮಂಚಿ ಫ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸುಶೀಲಾ, ಆರೋಗ್ಯ ಸಹಾಯಕಿ ಇಂದಿರಾ, ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಟಿ ಎಸ್,ಶಾಲಾ ಹಂತದ ನೋಡೆಲ್ ಶಿಕ್ಷಕಿ ಶಶಿ ಬಿ ಉಪಸ್ಥಿತರಿದ್ದರು.
ಲಸಿಕೆಯ ಕುರಿತಾಗಿ ಹರಡಿರುವ ಯಾವುದೇ ವದಂತಿಗಳಿಗೆ ಕಿವಿಗೊಡದೆ ಮಕ್ಕಳ ಆರೋಗ್ಯ ದೃಷ್ಟಿಯಿಂದ ಎಲ್ಲರೂ ತಮ್ಮ ಮಕ್ಕಳಿಗೆ ಲಸಿಕೆಯನ್ನು ನೀಡಬೇಕಾಗಿ ಗ್ರಾಮ ಪಂಚಾಯತ್ ಅದ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಹೇಳಿದರು. ಶಶಿ ಬಿ ಸ್ವಾಗತಿಸಿ ಮಖ್ಯ ಸುಜಾತ ಟಿ ಯಸ್ ವಂದಿಸಿದರು.ಸಹ ಶಿಕ್ಷಕಿ ಜೋನ್ ಅಂತೋನಿ ಫೆರ್ನಾಂಡಿಸ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಇರಾ ತಾಳಿತ್ತಬೆಟ್ಟು ಶಾಲೆಯಲ್ಲಿ ಲಸಿಕಾ ಅಭಿಯಾನ"