ಅರ್ಕುಳ ವರಪ್ರದ ಸ್ವಯಂಭೂ ಶ್ರೀ ವರದೇಶ್ವರ ಸನ್ನಿಧಿಯಲ್ಲಿ ಶ್ರೀದೇವರ ವಾರ್ಷಿಕ ಜಾತ್ರಾ ಮಹೋತ್ಸವ ಸಂಭ್ರಮ ಫೆ.13ರಿಂದ ಫೆ.15ವರೆಗೆ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಪೊಳಲಿ ಕೃಷ್ಣ ತಂತ್ರಿ ತಿಳಿಸಿದ್ದಾರೆ.
ಈ ಪ್ರಯುಕ್ತ 12ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತದೆ. 13ರಂದು ಬೆಳಗ್ಗೆ ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಪ್ರಸಾದ, ಸಂಜೆ 6ರಿಂದ ಉತ್ಸವ ಬಲಿ, ಪಾಲಕಿ ಉತ್ಸವ, 14ರಂದು ಬೆಳಗ್ಗೆ 10ರಿಂದ ಹಗಲು ರಥೋತ್ಸವ, ಸಂಜೆ 6ರಿಂದ ಬಯನ ಬಲಿ, ರಥೋತ್ಸವ ನಡೆಯಲಿದೆ. 15ರಂದು ಬೆಳಗ್ಗೆ ಕವಾಟೋದ್ಘಾಟನೆ, ಸಂಜೆ ಯಾತ್ರಾ ಹೋಮ, ಅವಭೃತೋತ್ಸವ ನಡೆಯುವುದು. 24ರಂದು ಇದೇ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಅರ್ಕುಳ ಶ್ರೀ ವರದೇಶ್ವರ ಜಾತ್ರೆ 13ರಿಂದ"