ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆ.೭ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ತೆಂಗು ಬೆಳೆಗಾರರ ಫೆಡರೇಶನ್ ಆಶ್ರಯದಲ್ಲಿ ಸಜೀಪಮೂಡ ತೆಂಗು ಬೆಳೆಗಾರರ ಸೊಸೈಟಿಯನ್ನು ಮಂಗಳೂರು ತೆಂಗು ಬೆಳೆಗಾರರ ಫೆಡರೇಶನ್ ಅಧ್ಯಕ್ಷ ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಮನೋಹರ ಶೆಟ್ಟಿ , ತುಂಬೆ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಎನ್.ಕೆ.ಇದಿನಬ್ಬ, ತಾಲೂಕು ರೈತ ಸಂಘದ ಕಾರ್ಯದರ್ಶಿ ಸುದೇಶ ಮಯ್ಯ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ತುಳುನಾಡ ಕೃಷಿ ಕ್ರಾಂತಿ ಅಂಗವಾಗಿ ಸಜೀಪಮುನ್ನೂರು ಗ್ರಾಮದ 6 ಎಕರೆಯಲ್ಲಿ ಮಾಡಿದ ಭತ್ತದ ಹಾಗೂ ದ್ವಿದಳ ಧಾನ್ಯದ ಕೃಷಿಯನ್ನು ವೀಕ್ಷಿಸಲಾಗುವುದು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "7ರಂದು ತೆಂಗು ಬೆಳೆಗಾರರ ಸೊಸೈಟಿ ಉದ್ಘಾಟನೆ"