ಬರಗೂರು ತಳಿಗೆ ಆಗುವ ತೊಂದರೆ ಸರಿಪಡಿಸದಿದ್ದರೆ ಹೋರಾಟ ನಿಶ್ಚಿತ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
www.bantwalnews.com report
ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಮಹಾಮಂಗಲ ಕಾರ್‍ಯಕರ್‍ತರಾಗಿ ಸೇವೆ ಸಲ್ಲಿಸಿದವರಿಗೆ ಅನುಗ್ರಹ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಹಸುಗಳಿಗೆ ತೊಂದರೆ ನೀಡುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಬುಡಕಟ್ಟು ಜನಾಂಗದವರ ಪರವಾಗಿ ಎಲ್ಲರೂ ಇದ್ದೇವೆ ಎಂಬ ಸಂದೇಶವನ್ನು ಈಗಾಗಲೇ ನೀಡಲಾಗಿದೆ. ಮಠದಿಂದ ಅಧ್ಯಯನ ತಂಡವನ್ನು ಎರಡು ಬಾರಿ ಆ ಭಾಗಕ್ಕೆ ಕಳುಹಿಸಿದ್ದು, ಮತ್ತೆ ಒಂದು ತಂಡ ನಾಳೆಯಿಂದ ಆಭಾಗದಲ್ಲಿ ಅಧ್ಯಯನ ನಡೆಸಲಿದೆ. 12 ಹುಲಿಗಳ ರಕ್ಷಣೆಯ ಹೆಸರಿನಲ್ಲಿ ಲಕ್ಷ ದೇಸೀ ಗೋವುಗಳಿಗೆ ತೊಂದರೆ ಮಾಡುವುದು ಎಷ್ಟು ಸರಿಯಾಗಿರುತ್ತದೆ. ಮಲೆ ಮಹದೇಶ್ವರ ಬೆಟ್ಟದ ಆಸುಪಾಸಿನಲ್ಲಿ ಫೆ 15ರಂದು ಬರಗೂರು ತಳಿ ಸಂರಕ್ಷಣೆಯ ಅಂದೋಲ ನಡೆಸುವ ಬಗ್ಗೆ ಈಗಾಗಲೇ ರೋಪುರೇಷೆಯನ್ನು ಹಾಕಿಕೊಳ್ಳಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಆ ಭಾಗದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಮಾಧ್ಯಮ ಕಾರ್ಯದರ್ಶಿ ರಾಮಚಂದ್ರ ಅಜ್ಜಕ್ಕಾನ, ಶ್ರೀ ರಾಮಚಂದ್ರಾಪುರ ಮಠ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿ ಬಂಗಾರಡ್ಕ ಜನಾರ್ಧನ ಭಟ್, ಕೋಶಾಧಿಕಾರಿ ಮೈಕೆ ಗಣೇಶ್ ಭಟ್, ಮಂಗಳೂರು, ಉಪ್ಪಿನಂಗಡಿ, ಮುಳ್ಳೇರಿಯಾ ಮಂಡಲದ ಮತ್ತಿತರರು ಹಾಜರಿದ್ದರು.
Be the first to comment on "ಹುಲಿ ಸಂರಕ್ಷಣೆ ಹೆಸರಲ್ಲಿ ಹಸುಗಳಿಗೆ ತೊಂದರೆ ನೀಡದಿರಿ: ರಾಘವೇಶ್ವರ ಸ್ವಾಮೀಜಿ"