ಬಂಟ್ವಾಳ ಎಸ್.ವಿ.ಎಸ್. ಕಾಲೇಜು ರಸ್ತೆಯ ವೈದ್ಯನಾಥ ದೇವಸ್ಥಾನ ಬಳಿ ಜಂಕ್ಷನ್ ಪಕ್ಕ 40 ಅಡಿ ಆಳಕ್ಕೆ ಗುರುವಾರ ರಾತ್ರಿ ಫಾರ್ಚೂನರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು, ಚಾಲಕ ವಿಟ್ಲ ನಿವಾಸಿ, ಅನಂತೇಶ್ವರ ದೇವಳ ಅರ್ಚಕ ಕಾರ್ತಿಕ್ ಭಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
www.bantwalnews.com report
ಜಾಹೀರಾತು
ಕಟೀಲು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಾಹನದಲ್ಲಿ ಕಾರ್ತಿಕ್ ಅವರ ತಂದೆ ವಿಜಯ ಭಟ್, ತಾಯಿ ದೀಪಾ ಭಟ್, ಮಕ್ಕಳಾದ ಅಥರ್ವ ಮತ್ತು ಆದ್ಯ ಕಾರಿನಲ್ಲಿದ್ದರು. ಇವರೆಲ್ಲ ಅಪಾಯದಿಂದ ಪಾರಾಗಿದ್ದಾರೆ.
ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್.ಐ.ಚಂದ್ರಶೇಖರಯ್ಯ ತನಿಖೆ ನಡೆಸುತ್ತಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಉರುಳಿದ ಕಾರು, ವಿಟ್ಲದ ಅರ್ಚಕ ಸ್ಥಳದಲ್ಲೇ ಸಾವು"