- ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಅರಣ್ಯ ಇಲಾಖೆಯಿಂದ ವಿತರಣೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮಶ್ರೀ ನಾರಾಯಣ ಗುರುಮಂದಿರದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಅವರ ಅರಣ್ಯ ಇಲಾಖೆ ವತಿಯಿಂದ ವಿಶಿಷ್ಠ ಕಾರ್‍ಯಕ್ರಮ ಶುಕ್ರವಾರ ದಿನವಿಡೀ ನಡೆಯಲಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಿಸುವ ಕಾರ್‍ಯಕ್ರಮ ಇದು.
ಅರಣ್ಯದ ಅಂಚಿನಲ್ಲಿರುವ ಜನರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ವಿವಿಧ ಯೋಜನೆಯಡಿ ಇಲಾಖೆ ಸಿಲಿಂಡರ್ ವಿತರಿಸುತ್ತದೆ. ಬಂಟ್ವಾಳ ವಲಯ ವ್ಯಾಪ್ತಿಯಲ್ಲಿ ಸುಮಾರು ೬೦೦ ಫಲಾನುಭವಿಗಳು ಇದ್ದು, ಇವರ ದಾಖಲೆಗಳನ್ನು ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪರಿಶೀಲಿಸಲಾಗುವುದು ಎಂದು ಆರ್.ಎಫ್.ಒ. ಸುರೇಶ್ ಮಾಹಿತಿ ನೀಡಿದ್ದಾರೆ.
ಮಂಗಳೂರು ವಿಭಾಗದಲ್ಲಿ ೨ ಸಾವಿರ ಫಲಾನುಭವಿಗಳು ಇದ್ದು, ಬಂಟ್ವಾಳ ತಾಲೂಕಿನ ೪೪ ಪಂಚಾಯಿತಿಗಳಲ್ಲಿ ಆಯಾ ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳು ಆಯ್ಕೆ ಮಾಡುತ್ತಾರೆ. ಈಗ ಆಯ್ಕೆಯಾದ ಫಲಾನುಭವಿಗಳು ಶುಕ್ರವಾರ ದಾಖಲೆಗಳನ್ನ ನೀಡುವರು. ಅಪರಾಹ್ನ ೩ ಗಂಟೆಗೆ ಸಚಿವ ಬಿ.ರಮಾನಾಥ ರೈ ಸಾಂಕೇತಿಕವಾಗಿ ಅಡುಗೆ ಅನಿಲ ವಿತರಿಸುವರು.

Be the first to comment on "600 ಪ.ಜಾ, ಪಪಂ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸೌಲಭ್ಯ"