ಮಂಗಳಗಂಗೋತ್ರಿ ಮಾಧ್ಯಮ ಹಳೆ ವಿದ್ಯಾರ್ಥಿಗಳ ಸಂಘ (ಮಾಮ್), ಭಾರತೀಯ ರೆಡ್‌ಕ್ರಾಸ್ ಮತ್ತು ಮಂಗಳೂರಿನ ಮಹಾಲಸಾ ಕಲಾ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಜ.27ರಂದು ಮರಳು ಕಲಾಕೃತಿ ರಚನಾ ಕಾರ್ಯಕ್ರಮ ಪಣಂಬೂರು ಕಡಲ ತೀರದಲ್ಲಿ ನಡೆಯಿತು
‘ಯುವಜನತೆ ಮತ್ತು ಮಾದಕವಸ್ತುಗಳು’ ಎಂಬ ವಿಷಯದಡಿಯಲ್ಲಿ ಕಲಾಕೃತಿ ರಚನೆಗೊಳ್ಳಲಿದೆ ಮಹಾಲಸಾ ಕಾಲೇಜ್‌ನ 13 ಜನರ ಕಲಾ ತಂಡದಲ್ಲಿ ಮಹೀಂದ್ರ ಆಚಾರ್ಯ ಹಾಗೂ ಅಶ್ವತ್ ಭಟ್ ಮುಂದಾಳತ್ವ ವಹಿಸಿದರು.
ಈ ಕಾರ್‍ಯಕ್ರಮದ ಉದ್ದೇಶ ಮಾದಕವಸ್ತುಗಳ ನಿರ್ಮೂಲನೆ ಆಗಿದ್ದು, ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ರೆಡ್‌ಕ್ರಾಸ್‌ನ ಜಿಲ್ಲಾವಿಪತ್ತು ನಿರ್ವಹಣಾ ಉಪ ಸಮಿತಿ ಅಧ್ಯಕ್ಷ ವೇಣು ಶರ್ಮಾತಿಳಿಸಿದರು. ಮಾಮ್ ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್ ಮಾತನಾಡಿ ಸಂವಹನದ ಕುರಿತು ಕಾಲೇಜುಗಳಲ್ಲಿ ತರಬೇತಿ ನೀಡುವ ಬಗ್ಗೆ ’ಮಾಮ್’ ಕ್ರಿಯಾಶೀಲವಾಗಲಿದೆ ಎಂದರು. ಎಂ. ಆರ್. ಪಿ. ಎಲ್. ನ ಡಿಜಿಎಂ (ಎಚ್ ಆರ್) ಲಕ್ಷ್ಮೀಕುಮಾರನ್ ಮಾತನಾಡಿ ’ದಕ್ಷಿಣಕನ್ನಡ ಜಿಲ್ಲೆ ವೈವಿಧ್ಯಮಯ ಕಲಾ ಮಂಡಲ’ ಎಂದರು. ಮಹಾಲಸಾ ಕಾಲೇಜ್ ಪ್ರಾಂಶುಪಾಲ ಪುರುಷೋತ್ತಮ ನಾಯಕ್ ಶುಭ ಹಾರೈಸಿದರು. ಕುಮಾರಿ ಧನ್ಯ ಕಾರ್‍ಯಕ್ರಮ ನಿರ್ವಹಿಸಿದರು.
Be the first to comment on "ಡ್ರಗ್ಸ್ ವಿರೋಧಿ ಮರಳು ಕಲಾಕೃತಿ ರಚನೆ"