ಭಾರತದ ರಾಷ್ಟ್ರಧ್ವಜ ರಾರಾಜಿಸುವುದು ಗಾಳಿಯಿಂದಲ್ಲ. ನಮ್ಮ ದೇಶದ ಸೈನಿಕರ ಶ್ರಮದಿಂದ, ಆ ಎಲ್ಲಾ ಸೈನಿಕರಿಗೂ ನಾವು ಕೃತಜ್ಞತೆಯನ್ನು ಸಲ್ಲಿಸಬೇಕು. ನಮ್ಮ ಸಂವಿಧಾನ ಅಂಗೀಕಾರವಾದ ದಿನದಂದು ನಾವು ನಮ್ಮ ರಾಷ್ಟ್ರಪುರುಷ, ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್‌ರವನ್ನು ನೆನಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರ್ ತಿಳಿಸಿದರು.
ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ 68ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಧ್ವಜಾರೋಹಣಗೈದು ಮಾತನಾಡಿದರು. ಈ ಸಂದರ್ಭ ಶಾಲಾ ಸಂಚಾಲಕರಾದ ವಸಂತ ಮಾಧವ, ಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರ ಸಾಲ್ಯಾನ್, ಪದವಿ ವಿಭಾಗದ ಪ್ರಾಂಶುಪಾಲರಾದ ವಸಂತ ಬಲ್ಲಾಳ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕರಾದ ರಮೇಶ್ ಎನ್, ಪ್ರಾಥಮಿಕ ವಿಭಾಗ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಜಾಹೀರಾತು
ಧ್ವಜಾರೋಹಣ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಶಾರೀರಿಕ ಪ್ರದರ್ಶನ ಮತ್ತು ಸ್ವಚ್ಛತಾ ಕಾರ್ಯ ಮಾಡಲಾಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಅಂಬೇಡ್ಕರ್ ನೆನಪಿಸುವುದು ನಮ್ಮೆಲ್ಲರ ಕರ್ತವ್ಯ: ದಿನೇಶ್ ಅಮ್ಟೂರು"