ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಅಂಗವಾಗಿ ಶಿಲಾ ಮೆರವಣಿಗೆ ಸೋಮವಾರ ಸಂಜೆ ನಡೆಯಿತು.
ತುಂಬೆ ಜಂಕ್ಷನ್ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆ ಚಾಲನೆ ನೀಡಿದರು. ಬಳಿಕ ಮೆರವಣಿಕೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ದೇವಸ್ಥಾನದತ್ತ ಸಾಗಿತು. ಗೊಂಬೆ ಕುಣಿತ, ಚೆಂಡೆ, ವಾದ್ಯ ಹಿಮ್ಮೇಳ ಮೆರವಣಿಗೆಗೆ ಹೊಸ ಮೆರುಗು ನೀಡಿತು.
www.bantwalnews.com report
ಈ ಸಂದರ್ಭ ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ, ಪದ್ಮಶೇಖರ್ ಜೈನ್, ತಾ.ಪಂ.ಸದಸ್ಯ ಗಣೇಶ್ ಸುವರ್ಣ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪ್ರಮುಖರಾದ ಸೇಸಪ್ಪ ಕೋಟ್ಯಾನ್, ಜಯರಾಮ ಸಾಮಾನಿ, ಜಯಪ್ರಕಾಶ್ ತುಂಬೆ, ಉಮೇಶ್ ಸುವರ್ಣ, ಸೋಮಪ್ಪ ಕೋಟ್ಯಾನ್, ವೆಂಕಪ್ಪ ಅಡಪ, ಶ್ರೀಧರ ರಾವ್, ದಿವಾಕರ ಪಂಬದಬೆಟ್ಟು, ಜೀವನ ಆಳ್ವ, ಪ್ರಕಾಶ್ ಬಿ.ಶೆಟ್ಟಿ, ಗೋಪಾಲಕೃಷ್ಣ, ಮೋನಪ್ಪ ಮಜಿ, ದೇವದಾಸ್ ತುಂಬೆ ಹಾಜರಿದ್ದರು.
Be the first to comment on "ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶಿಲಾ ಮೆರವಣಿಗೆ"