ವ್ಯಕ್ತಿಯೊಬ್ಬ ವಿದೇಶದಿಂದ ವಿಟ್ಲದ ಪತ್ರಕರ್ತರೊಬ್ಬರಿಗೆ ವಾಟ್ಸ್ಆಫ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ ಘಟನೆಗೆ ಸಂಬಂಧಿಸಿ ಸೂಕ್ತ ತನಿಖೆ ಕೈಗೊಳ್ಳಲಾಗುವುದು ಎಂದು ಎಸ್ಪಿ ಭೂಷಣ್ ಜಿ.ಬೊರಸೆ ಹೇಳಿದ್ದಾರೆ.ಈಗಾಗಲೇ ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
www.bantwalnews.com report
ವರದಿಯೊಂದಕ್ಕೆ ಸಂಬಂಧಿಸಿ ವಿದೇಶದಲ್ಲಿರುವ ಆರೋಪಿ ಕಾನತ್ತಡ್ಕ ಆರೀಸ್ ಎಂಬಾತ ತನಗೆ ಕರೆ ಮಾಡಿ ನಿಂದಿಸಿ, ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿ ಬೆದರಿಸಿದ್ದಾರೆ ಎಂದು ಪತ್ರಕರ್ತ ಮಹಮ್ಮದ್ ಆಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಅಲಿ ಅವರು ಜಿಲ್ಲಾ ಎಸ್.ಪಿ ಭೂಷಣ್ ರಾವ್ ಬೊರಸೆ ಅವರಿಗೆ ಮಾಹಿತಿ ನೀಡಿದ್ದು, ಅವರ ಸೂಚನೆ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯನ್ನು ಬಂಟ್ವಾಳ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಅವರು ಖಂಡಿಸಿದ್ದು, ನಿರಂತರವಾಗಿ ಪತ್ರಕರ್ತರಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಪತ್ರಕರ್ತರಿಗೆ ಅಡ್ಡಿಪಡಿಸಲಾಗುತ್ತಿದೆ. ತಕ್ಷಣವೇ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
Be the first to comment on "ವಿಟ್ಲ ಪತ್ರಕರ್ತಗೆ ಬೆದರಿಕೆ: ಸೂಕ್ತ ತನಿಖೆ – ಎಸ್ಪಿ"