ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ’ಮಾನವ ಹಕ್ಕುಗಳು – ವಿವಾದಗಳು ಮತ್ತು ಕಾಳಜಿ’ ಎಂಬ ವಿಷಯದ ಕುರಿತ ರಾಷ್ಟ್ರ ಮಟ್ಟದ ಯುಜಿಸಿ ಪ್ರಾಯೋಜಿತ ಒಂದು ದಿನದ ವಿಚಾರ ಸಂಕಿರಣ ನಡೆಯಿತು.
www.bantwalnews.com report
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ನಿಕಟಪೂರ್ವ ಉಪಕುಲಪತಿ ಪ್ರೊ.ಜಿ.ಆರ್.ಜಗದೀಶ್ ಉದ್ಘಾಟಿಸಿದರು. ಅವರು ಮಾತನಾಡಿ, ಮಾನವ ಹಕ್ಕುಗಳು ವ್ಯಕ್ತಿ ಮತ್ತು ಸಮಾಜದ ಹಿತಕ್ಕೆ ಪೂರಕವಾದುದು ಆದರೆ, ನಾವೇ ಕಾನೂನುಗಳಾಗಬಾರದು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ| ಪಿ.ಎಲ್ ಧರ್ಮ ಮಾತನಾಡಿ ಪ್ರತಿಯೊಬ್ಬರಲ್ಲೂ ಈ ಕುರಿತು ಅರಿವು ಮೂಡಿಸುವ ವಿಚಾರ ಸಂಕಿರಣಗಳು ನಡೆಯುತ್ತಿರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಅತಿಥಿಗಳನ್ನು ಪರಿಚಯಿಸಿ, ಎಲ್ಲರನ್ನೂ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಯೋಜಕರು ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಪ್ರೇಮಲತಾ ಪೈ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಚಾರ ಸಂಕಿರಣದ ಸಹ ಸಂಯೋಜಕರಾದ ಪ್ರೊ. ನಾರಾಯಣ ಭಂಡಾರಿ ವಂದಿಸಿದರು. ಉಪನ್ಯಾಸಕಿ ರಶಿತಾ ಕೆ ಎನ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಶ್ರೀಮತಿ ರೂಪ ಸಹಕರಿಸಿದರು. ಕು.ಗಾಯನ ಪ್ರಭು ಪ್ರಾರ್ಥಿಸಿದರು.
Be the first to comment on "ನಾವೇ “ಕಾನೂನು’’ಗಳಾಗಬಾರದು"