ಮಂಗಳಗಂಗೋತ್ರಿ ಮಾಧ್ಯಮ ಹಳೆ ವಿದ್ಯಾರ್ಥಿಗಳ ಸಂಘ (ಮಾಮ್), ಭಾರತೀಯ ರೆಡ್‌ಕ್ರಾಸ್ ಮತ್ತು ಮಂಗಳೂರಿನ ಮಹಾಲಸಾ ಕಲಾ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಜ.27ರಂದು ಮರಳು ಕಲಾಕೃತಿ ರಚನಾ ಕಾರ್ಯಕ್ರಮ ಪಣಂಬೂರು ಕಡಲ ತೀರದಲ್ಲಿ ನಡೆಯಲಿದೆ.
www.bantwalnews.com report
27ರಂದು ಬೆಳಗ್ಗಿನ ಜಾವ 5.30 ಕ್ಕೆ ಮಹಾಲಸಾ ವಿದ್ಯಾರ್ಥಿಗಳು ಮರಳು ಕಲಾಕೃತಿ ರಚನೆ ಆರಂಭಿಸಲಿದ್ದು, ಸಂಜೆ 4 ಗಂಟೆ ವೇಳೆಗೆ ಪೂರ್ಣಗೊಳ್ಳಲಿದೆ. ‘ಯುವಜನತೆ ಮತ್ತು ಮಾದಕವಸ್ತುಗಳು’ ಎಂಬ ವಿಷಯದಡಿಯಲ್ಲಿ ಕಲಾಕೃತಿ ರಚನೆಗೊಳ್ಳಲಿದೆ ಮಹಾಲಸಾ ಕಾಲೇಜ್‌ನ ಕಲಾ ತಂಡ ’ಇನ್‌ಸ್ಯಾನಿಟಿ’ಯ ವಿದ್ಯಾರ್ಥಿ ಮುಖಂಡರಾದ ಅಶ್ವತ್ ಭಟ್ ಹಾಗೂ ಮಹೀಂದ್ರ ಆಚಾರ್ಯ ತಿಳಿಸಿದ್ದಾರೆ.
ರೆಡ್‌ಕ್ರಾಸ್‌ನ ಜಿಲ್ಲಾವಿಪತ್ತು ನಿರ್ವಹಣಾ ಉಪ ಸಮಿತಿ ಅಧ್ಯಕ್ಷ ವೇಣು ಶರ್ಮಾ, ಮಾಮ್ ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್, ಎಂಆರ್ಪಿಎಲ್‌ನ ಡಿಜಿಎಂ (ಎಚ್‌ಆರ್) ಲಕ್ಷ್ಮೀಕುಮಾರನ್ ಮಹಾಲಸಾ ಕಾಲೇಜ್ ಪ್ರಾಂಶುಪಾಲ ಪುರುಷೋತ್ತಮ ನಾಯಕ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾಧ್ಯಮ ಸಂಘಟನೆ, ಕಲಾಶಾಲೆ ಹಾಗೂ ರೆಡ್‌ಕ್ರಾಸ್ ಮೂರು ಸಂಘಟನೆಗಳ ಉದ್ದೇಶ ಮಾದಕವಸ್ತುಗಳ ನಿರ್ಮೂಲನೆ ಆಗಿದ್ದು, ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಈ ಸದುದ್ದೇಶದಿಂದ ಸಂಯುಕ್ತವಾಗಿ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಜ.27 ರಂದು ಡ್ರಗ್ಸ್ ವಿರೋಧಿ ಮರಳು ಕಲಾಕೃತಿ ರಚನೆ"