ನನ ಏರುಲ್ಲೆರ್ ಪ್ರಥಮ, ಸ್ಟಾರ್ ದ್ವಿತೀಯ, ಮದಿರೆಂಗಿ ತೃತೀಯ

ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ಆಶ್ರಯದಲ್ಲಿ ,ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಇವರ ಸಹಕಾರದೊಂದಿಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ  ಒಂದು ವಾರ ಜರಗಿದ ಅಂತರ್‌ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ಧರಿತ್ರಿ ಮಂಗಳೂರು ತಂಡ ಅಭಿನಯಿಸಿದ ನನ ಏರುಲ್ಲೆರ್ ಪ್ರಥಮ ಮತ್ತು ಚೈತನ್ಯ ಕಲಾವಿದೆರ್ ಬಲೂರು ತಂಡದ ಸ್ಟಾರ್ ದ್ವಿತೀಯ,ತೆಲಿಕೆದ ತೆನಾಲಿ ಕಾರ್ಲ ತಂಡದ ಮದಿರೆಂಗಿ ತೃತೀಯ ಪ್ರಶಸ್ತಿ ಪಡೆದಿದ್ದಾರೆ.

www.bantwalnews.com report

ಜಾಹೀರಾತು

ಜ.21ರಂದು ಸಂಜೆ ನಡೆದ ಸಮಾರೋಪದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಬೆಳ್ತಂಗಡಿ  ಶಾಸಕ,ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ವಸಂತ ಬಂಗೇರ ಅವರು ಅಧ್ಯಕ್ಷತೆ ವಹಿಸಿದ್ದರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಪ್ರಶಸ್ತಿ ವಿತರಿಸಿದರು. ತುಳು ನಾಟಕಕಾರ,ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬಲ್,ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಗ್ರಾ.ಪಂ.ಅಧ್ಯಕ್ಷ ಗೋಪಾಲಕೃಷ್ಣ, ಬಿಕರ್ನಕಟ್ಟೆ ಇನೆಂಟ್ ಜೀಸಸ್ ಚರ್ಚ್ ಫಾ| ವಿಲಿಯಂ ಮಿರಾಂದ,ಉದ್ಯಮಿ ಹೇಮಂತ್ ಕುಮಾರ್, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಎಂ.,ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಬಂಧಕ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ,ಪಿಲಾತಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಂದರ ನಾಯ್ಕ,ಪ್ರಗತಿಪರ ಕೃಷಿಕ ಬಾಲಯ್ಯ ಹೆಗ್ಡೆ ಬದ್ಯಾರು, ಸ್ವರ್ಣೋದ್ಯಮಿ ಲೋಕೇಶ್ ಆಚಾರ್ಯ,ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ವೇಳೆ ಶಾಸಕ ವಸಂತ ಬಂಗೇರ,ಬಂಟ್ವಾಳ ತಾಲೂಕು ಬ್ಯಾರಿ ಫೌಂಡೇಶನ್ ಅಧ್ಯಕ್ಷ ,ನಾಟಕ ಕಲಾವಿದ ಪಿ.ಎ.ರಹೀಮ್ ಮತ್ತು ನಿವೃತ್ತ ಅಧ್ಯಾಪಕ,ಕಲಾವಿದ,ನಾಟಕ ನಿರ್ದೇಶಕ ರಮಾ ಬಿ.ಸಿ.ರೋಡ್,ತೀರ್ಪುಗಾರರಾದ ಡಿ.ಎಸ್.ಬೋಳೂರು,ರಾಮಚಂದ್ರ ರಾವ್,ಬಿ.ಚೇತನ್ ರೈ ಮಾಣಿ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರು ಅನಿಸಿಕೆ ವ್ಯಕ್ತಪಡಿಸಿದರು. ಮೇಧಾವಿ,ಉಮಾ ಡಿ.ಗೌಡ ಸಮ್ಮಾನಿತರನ್ನು ಪರಿಚಯಿಸಿದರು.

ಜಾಹೀರಾತು

ರಾಜೇಂದ್ರ ಕೆ.ವಿ.ಅವರು ಸ್ವಾಗತಿಸಿದರು. ಹರೀಶ್ಚಂದ್ರ ಶೆಟ್ಟಿಗಾರ್ ವಂದಿಸಿದರು. ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ: ನಿರ್ದೇಶನ- ಪ್ರಥಮ: ಪ್ರಸನ್ನ ಶೆಟ್ಟಿ ಬಲೂರು (ಸ್ಟಾರ್,ಚೈತನ್ಯ ಕಲಾವಿದರು ಬಲೂರು) ದ್ವಿತೀಯ: ಮನೋಹರ್ ಶೆಟ್ಟಿ ನಂದಳಿಕೆ (ನನ ಏರುಲ್ಲೆರ್,ಧರಿತ್ರಿ ಮಂಗಳೂರು). ಸಂಗೀತ- ಪ್ರ: ಸುರೇಶ್(ಸ್ಟಾರ್,ಚೈತನ್ಯ ಕಲಾವಿದರು ಬಲೂರು),ದ್ವಿ: ಮೋನಿಕ(ನನ ಏರುಲ್ಲೆರ್,ಧರಿತ್ರಿ ಮಂಗಳೂರು). ರಂಗವಿನ್ಯಾಸ-ಪ್ರ: ಚೈತನ್ಯ ಕಲಾ ಆರ್ಟ್ಸ್(ಸ್ಟಾರ್), ದ್ವಿ: ಧರಿತ್ರಿ(ನನ ಏರುಲ್ಲೆರ್). ಪ್ರಸಾದನ-ಪ್ರ: ಶರತ್ ಬಲೂರು(ಸ್ಟಾರ್),ದ್ವಿ: ಭಾವನ ಕಲಾ ಆರ್ಟ್ಸ್(ಪನ್ಪಿನಕುಲು ಪನ್ಪೆರ್). ಶ್ರೇಷ್ಟ ನಟ-ಪ್ರ: ರಮಾನಂದ ನಾಯಕ್(ರಾಮಾಚಾರಿ-ಮದಿರೆಂಗಿ),ದ್ವಿ: ಶಿವಶಂಕರ ಮೈಯ್ಯ(ಸಚ್ಚು-ನನ ಏರುಲ್ಲೆರ್). ಶ್ರೇಷ್ಟ ನಟಿ-ಪ್ರ: ಕು|ಜ್ಯೋತಿ(ನೇತ್ರಾ-ಪನ್ಪಿನಕುಲು ಪನ್ಪೆರ್),ದ್ವಿ: ಕು|ಅಶ್ವಿನಿ(ಕಾವ್ಯ-ಸ್ಟಾರ್). ಶ್ರೇಷ್ಠ ಹಾಸ್ಯ ನಟ-ಪ್ರ: ಪ್ರಶಾಂತ್ ಅಂಚನ್(ಮಂಜ-ನನ ಏರುಲ್ಲೆರ್),ದ್ವಿ: ಸುನೀಲ್ ನೆಲ್ಲಿಗುಡ್ಡೆ (ಸೋಮನಾಥ-ಮದಿರೆಂಗಿ). ಶ್ರೇಷ್ಠ ಹಾಸ್ಯ ನಟಿ-ಪ್ರ: ಸುರೇಶ್(ನೇತ್ರಾವತಿ-ಸ್ಟಾರ್)ದ್ವಿ: ಸುರೇಶ್ ಶೆಟ್ಟಿ ಜೋಡುಕಲ್ಲು(ನಿಮ್ಮಿ-ಮದ್ಮೆ ಒಂಜಿ ಆಂಡ್‌ಗೆತ್ತಾ). ಶ್ರೇಷ್ಠ ಪೋಷಕ ನಟ-ಪ್ರ: ರಾಕೇಶ್(ಗೋಪಜ್ಜ-ಸ್ಟಾರ್),ದ್ವಿ: ಪುಷ್ಪರಾಜ್ ಬೋಳಾರ್(ಪೂವಪ್ಪ-ನನ ಏರುಲ್ಲೆರ್). ಶ್ರೇಷ್ಠ ಪೋಷಕ ನಟಿ-ಪ್ರ: ಬಾಲಕೃಷ್ಣ ಮಾಸ್ತರ್ ಮಜಿಬಲ್(ಭಾನುಮತಿ-ಮದ್ಮೆ ಒಂಜಿ ಆಂಡ್‌ಗೆತ್ತಾ),ದ್ವಿ: ನಮಿತಾ ಪಂಜಿಮೊಗರು(ಜಯ ಟೀಚರ್-ನನ ಏರುಲ್ಲೆರ್).

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Bantwal News
2016 ನವೆಂಬರ್ 10ರಂದು ಆರಂಭಗೊಂಡ ಬಂಟ್ವಾಳದ ಮೊದಲ ವೆಬ್ ಪತ್ರಿಕೆ ಇದು. 25 ಲಕ್ಷಕ್ಕಿಂತಲೂ ಅಧಿಕ ಮಂದಿ ಕೇವಲ 45 ತಿಂಗಳಲ್ಲೇ ಓದಿದ ಜಾಲತಾಣವಿದು. ಸಂಪಾದಕ: ಹರೀಶ ಮಾಂಬಾಡಿ. ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಅವಸರದ ಸುದ್ದಿ ಕೊಡದೆ, ಮಾಹಿತಿ ಖಚಿತಗೊಂಡ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಅತಿರಂಜಿತ ಸುದ್ದಿ ಇಲ್ಲಿಲ್ಲ. ಇದು www.bantwalnews.com ಧ್ಯೇಯ.

Be the first to comment on "ನನ ಏರುಲ್ಲೆರ್ ಪ್ರಥಮ, ಸ್ಟಾರ್ ದ್ವಿತೀಯ, ಮದಿರೆಂಗಿ ತೃತೀಯ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*