ಕಾಟಾಚಾರಕ್ಕಾಗಿ ವಾರ್ಡ್ ಸಭೆ ನಡೆಸಿ ಪ್ರಯೋಜನ ಏನು? ಮದ್ಯದಂಗಡಿಗಳು ಧಾರ್ಮಿಕ ಶ್ರದ್ಧಾ ಕೇಂದ್ರದ ಪಕ್ಕದಲ್ಲೇ ತೆರೆಯಲು ಗ್ರಾಪಂ ಜನರ ವಿರೋಧವಿದ್ದಾಗಲೂ ಅನುಮತಿ ನೀಡೋದು ಯಾಕೆ?
ಎಂಬಿತ್ಯಾದಿ ಪ್ರಶ್ನೆಗಳು ಕನ್ಯಾನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ದ್ವಿತೀಯ ಸುತ್ತಿನ ಗ್ರಾಮ ಸಭೆಯಲ್ಲಿ ಕೇಳಲ್ಪಟ್ಟವು.
www.bantwalnews.com report
ಬಾಳೆಕೋಡಿ ಶ್ರೀ ಕಾಶೀ ಕಾಳಬೈರವೇಶ್ವರ ಶಿಲಾಂಜನ ಕ್ಷೇತ್ರದ ಬಳಿ ಬಾರ್ ಮತ್ತು ರೆಸ್ಟೋರೆಂಟ್ ನಿರ್ಮಾಣಕ್ಕೆ ಪರವಾನಗಿ ನೀಡಿದ್ದು ಸರಿಯಲ್ಲ. ಕನ್ಯಾನದಲ್ಲಿ ಅಕ್ರಮ ಮಧ್ಯದ ಕೇಂದ್ರಗಳು ಕಾರ್ಯಾಚರಿಸುತ್ತಿದ್ದರೆ ಎಲ್ಲವೂ ನಿಲ್ಲಿಸಲು ಪಂಚಾಯಿತಿ ಸೂಕ್ತ ಕ್ರಮಕೈಗೊಳ್ಳಲಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಕನ್ಯಾನ ಪೇಟೆಯ ಪಕ್ಕದಲ್ಲಿ ಕೋಳಿ ಫಾರಂನಿಂದ ತೊಂದರೆಯಾಗಿರುವ ಬಗ್ಗೆ ಗ್ರಾಮಸ್ಥರು ಗಮನ ಸೆಳೆದರು.
ತಾಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್ ಕುಮಾರ್ ಬದಿಕೋಡಿ ಮಾತನಾಡಿ ಬಾಳೆಕೋಡಿ ಬಳಿ ತೆರೆಯಲಾದ ಬಾರ್‌ಗೆ ಫೆ.2ರವರೆಗೆ ಬೆಂಗಳೂರು ಅಬಕಾರಿ ಕಮೀಷನರ್ ತೆಡೆ ನೀಡಿದ್ದು, ಪರಿಶಿಷ್ಠ ಪಂಗಡ ಹಾಗೂ ಪರಿಶಿಷ್ಠ ಜಾತಿಯವರ ಕಾಲೋನಿ ಇರುವಲ್ಲಿ ಬಾರ್ ನಿರ್ಮಾಣ ಮಾಡಬಾರದೆಂದು ಕಾನೂನು ಹೇಳಿತ್ತದೆ. ಅಕ್ರಮವಾಗಿ ಮಧ್ಯ ಮಾರಾಟ ಮಾಡುವವರ ಮಾಹಿತಿಯನ್ನು ನೀಡಿ ಕಾನೂನು ಕ್ರಮಜರಗಿಸುವಂತೆ ಗ್ರಾಮಸ್ಥರು ಸಹಕರಿಸಬೇಕೆಂದು ತಿಳಿಸಿದರು.
ಕಂದಾಯ, ಕೃಷಿ, ಆರೋಗ್ಯ, ಶಿಕ್ಷಣ, ವಿದ್ಯುತ್, ಪಶುಸಂಗೋಪನೆ, ತೋಟಗಾರಿಕೆ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಕನ್ಯಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಕಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಅಭಿಯಂತರ ಗಿರೀಶ್ ಭಾಗವಹಿಸಿದ್ದರು. ಉಪಾಧ್ಯಕ್ಷ ಕೆ ಪಿ ಅಬ್ದುಲ್ ರಹಿಮಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ, ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.
Be the first to comment on "ಕಾಟಾಚಾರದ ಸಭೆ ನಡೆಸಿ ಏನು ಪ್ರಯೋಜನ?"