ಒಗ್ಗರಣೆಗಷ್ಟೇ ಅಲ್ಲ ಸಾಸಿವೆ

ಸಣ್ಣಗಾತ್ರದ ಈ ಕಾಳು ದೊಡ್ಡ ಕಾರ್ಯವನ್ನೇ ಮಾಡುತ್ತದೆ. ಕೇವಲ ಪರಿಮಳ ಸೂಸುವ ಒಗ್ಗರಣೆಗಷ್ಟೇ ಅಲ್ಲ, ಸಾಸಿವೆ ಮಹಿಮೆ ಅಪಾರ

www.bantwalnews.com

ಜಾಹೀರಾತು
 • ಡಾ. ರವಿಶಂಕರ್ ಎ.ಜಿ.

ಅಂಕಣ ಪಾಕಶಾಲೆಯೇ ವೈದ್ಯಶಾಲೆ

ಸಾಸಿವೆ ಹಾಕದೆ ಒಗ್ಗರಣೆ ಇಲ್ಲ, ಸಾಸಿವೆಯು ವಿಷಘ್ನ ಗುಣವನ್ನು ಹೊಂದಿದೆ. ತಯಾರಿಸಿದ ಆಹಾರದಲ್ಲಿ ಏನಾದರು ವಿಷಪೂರಿತ ಅಂಶ ಇದ್ದರೆ,ಅದರ ನಿವಾರಣೆಗಾಗಿ ಒಗ್ಗರಣೆಗೆ ಸಾಸಿವೆಯನ್ನು ಸೇರಿಸುತ್ತಾರೆ. ಹಾಗೆಯೇ ಇದು ಪದಾರ್ಥದ ರುಚಿಯನ್ನೂ ಹೆಚ್ಚಿಸುತ್ತದೆ.

ಜಾಹೀರಾತು
 1. ಬಾವು ಪೂರಿತವಾದ ನೋವು ,ಆಮವಾತ ಇತ್ಯಾದಿಗಳಲ್ಲಿ ಸಾಸಿವೆಯನ್ನು ಬಿಸಿನೀರಿನಲ್ಲಿ ಅರೆದು ಲೇಪಹಾಕುವುದರಿಂದ ಬಾವು ಹಾಗು ನೋವು ಕಡಿಮೆಯಾಗುತ್ತದೆ.
 2. ಶರೀರದಲ್ಲಿ ಅಲರ್ಜಿಯಾಗಿ  ಮೈ  ತುರಿಕೆ ಇದ್ದರೆ ಸಾಸಿವೆಯ ಎಣ್ಣೆ ಹಚ್ಚಿ ಸ್ನಾನ ಮಾಡ ಬೇಕು.
 3. ಸಾಸಿವೆ ಎಣ್ಣೆಯು ಚರ್ಮಕ್ಕೆ ಕಾಂತಿ ಹಾಗು ಕೋಮಲತೆಯನ್ನು ನೀಡುತ್ತದೆ.
 4. ಶೀತ ಅಥವಾ ಕಫದ ಕಾರಣ ಕಿವಿ ನೋವು ಇದ್ದಾಗ ಸಾಸಿವೆಯನ್ನು ಜಜ್ಜಿ ತೆಂಗಿನ ಎಣ್ಣೆಯಲ್ಲಿ ಕುದಿಸಿ ಕಿವಿಗೆ 2 ರಿಂದ 3 ಬಿಂದು ಬಿಟ್ಟಲ್ಲಿ ಕಿವಿನೋವು ಕಡಿಮೆಯಾಗುತ್ತದೆ.
 5. ಮುಟ್ಟಿನ ರಕ್ತಸ್ರಾವ ಸರಿಯಾಗಿ ಆಗದಿದ್ದಲ್ಲಿ ಸಾಸಿವೆಯ ಕಷಾಯ ಮಾಡಿ ದಿನಕ್ಕೆ 50 ಮಿಲಿ. ಲೀ ನಷ್ಟು ಕುಡಿಯಬೇಕು.
 6. ಶರೀರದಲ್ಲಿ ಕೊಬ್ಬಿನ (Cholesterol ) ಅಂಶ ಜಾಸ್ತಿ ಇದ್ದಲ್ಲಿ ಪ್ರತಿದಿನ 5 ಗ್ರಾಂ ನಷ್ಟು ಸಾಸಿವೆಯನ್ನು ಬೆಳಗ್ಗೆ ಸೇವಿಸಬೇಕು
 7. ಸಾಸಿವೆಯಲ್ಲಿ ವಿಟಮಿನ್ ಎ ,ಕಬ್ಬಿಣ ಸತ್ವ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಇರುವ ಕಾರಣ ವಾರಕ್ಕೆ 1 ರಿಂದ 2 ಬಾರಿ  ಸಾಸಿವೆ ಎಣ್ಣೆಯನ್ನು ತಲೆಗ ಹಾಕಿದಲ್ಲಿ ತಲೆ ಕೂದಲು ಉದ್ದವಾಗಿ ಬೆಳೆಯುತ್ತದೆ.
 8. ಸಾಸಿವೆಯನ್ನು ಮಜ್ಜಿಗೆಯಲ್ಲಿ ಅರೆದು ವಾರಕ್ಕೆ 2 ಬಾರಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ತಲೆಯ ಹೊಟ್ಟು ಹಾಗು ತಿರಿಕೆ ನಿವಾರಣೆಯಾಗುತ್ತದೆ.
 9. ಮಲಬದ್ದತೆ ಇದ್ದಾಗ 5 ಗ್ರಾಂ ನಷ್ಟು ಸಾಸಿವೆಯನ್ನು ಬೆಲ್ಲದೊಂದಿಗೆ  ದಿನಕ್ಕೆರಡು  ಬಾರಿ ಸೇವಿಸಿದರೆ ಮಲಶೋಧನೆ ಸರಿಯಾಗಿ ಆಗುತ್ತದೆ.
 10. ಸಾಸಿವೆಯನ್ನು ಮಜ್ಜಿಗೆಯಲ್ಲಿ ಅರೆದು ಬಿಸಿ ಮಾಡಿ ಕತ್ತಿನ ಮುಂಭಾಗದಲ್ಲಿ ಕಾಣಿಸಿಕೊಳ್ಳುವ ಗಳಗಂಡಕ್ಕೆ ದಿನಾ ಹಚ್ಚಿದರೆ ನಿಧಾನವಾಗಿ ಬಾವು ಕರಗುತ್ತದೆ.
 11. ಹಲ್ಲಿನ ಬುಡದಲ್ಲಿ ಕೀವು ತುಂಬಿ ಸಿಡಿಯುತ್ತಿದ್ದರೆ ಸಾಸಿವೆಯನ್ನು ಪುಡಿಮಾಡಿ, ತೆಂಗಿನ ಎಣ್ಣೆಯಲ್ಲಿ ಬಿಸಿಮಾಡಿ,ನಂತರ ಸ್ವಲ್ಪ ಉಪ್ಪನ್ನು ಸೇರಿಸಿ 5 ರಿಂದ 7 ಚಮಚದಷ್ಟು ಬಾಯಿಗೆ ಹಾಕಿ ಮುಕ್ಕಳಿಸ ಬೇಕು. ಆವಾಗ  ಕೀವು ಹೊರಬಂದು ಸಿಡಿತ ಕಡಿಮೆಯಾಗುತ್ತದೆ.(ಸಾಸಿವೆ ಮತ್ತು ಉಪ್ಪನ್ನು ಅರೆದು ಹಲ್ಲಿನ ಬುಡಕ್ಕೆ ಲೆಪಿಸಿದರೂ ಆದೀತು)
 12. ಮೂತ್ರ ಪ್ರವೃತ್ತಿ ಸರಿಯಾಗಿ ಆಗದಿದ್ದರೆ ಸಾಸಿವೆ ಹುಡಿಯನ್ನು ತಿನ್ನಬೇಕು ಮತ್ತು ಸಾಸಿವೆಯನ್ನು ನೀರಿನಲ್ಲಿ ಅರೆದು ಹೊಕ್ಕುಳದ ಕೆಳಗಿನ ಭಾಗಕ್ಕೆ ಹಚ್ಚಬೇಕು.
 13. ಸಾಸಿವೆಗೆ ಕಫವನ್ನು ಕರಗಿಸುವ ಸಾಮರ್ಥ್ಯ ಇರುವ ಕಾರಣ, ಇದರ ಕಷಾಯವು ಕಫದಿಂದ ಉಂಟಾದ ಕೆಮ್ಮು ಹಾಗು  ದಮ್ಮುಕಟ್ಟುವಿಕೆಯಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ. ಸಾಸಿವೆ ಎಣ್ಣೆಯನ್ನು ಬಿಸಿಮಾಡಿ ಎದೆಗೆ ಹಚ್ಚಿದರೆ ಉತ್ತಮ.
 14. ಹೊಟ್ಟೆಯಲ್ಲಿ ಕ್ರಿಮಿಯ ಬಾಧೆಯಿಂದ ನೋವು ಮತ್ತು ಅರುಚಿ ಇದ್ದರೆ ಸಾಸಿವೆಯ ಹುಡಿಯನ್ನು 2 ರಿಂದ 5 ಗ್ರಾಂ ಆಗುವಷ್ಟು ಬೆಳಗ್ಗೆ ಖಾಲಿ ಹೊಟ್ಟೆಗೆ ಸ್ವಲ್ಪ ದಿನ ತೆಗೆದುಕೊಳ್ಳಬೇಕು.
 15. ಸಾಸಿವೆಯು ಆಹಾರದ ಜೀರ್ಣ ಕ್ರಿಯೆಗೆ ಅತ್ಯಂತ ಸಹಕಾರಿಯಾಗಿದೆ.

ಈ ಲೇಖನದ ಕುರಿತು ತಮ್ಮ ಅಭಿಪ್ರಾಯವನ್ನು ಬಂಟ್ವಾಳನ್ಯೂಸ್ ಜೊತೆ ಹಂಚಿಕೊಳ್ಳಿ. bantwalnews@gmail.com ಗೆ ಮೈಲ್ ಮಾಡಿ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Be the first to comment on "ಒಗ್ಗರಣೆಗಷ್ಟೇ ಅಲ್ಲ ಸಾಸಿವೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*