ಶಬರಿಮಲೆ ಯಾತ್ರೆ ಮುಗಿಸಿ ಧರ್ಮಸ್ಥಳಕ್ಕೆ ತೆರಳಿ ಹುಬ್ಬಳ್ಳಿಗೆ ಮರಳುತ್ತಿದ್ದ ಕಾರೊಂದರ ಯಾತ್ರಿಗಳನ್ನು ರಕ್ಷಿಸುವ ಮೂಲಕ ಸಚಿವ ಯು.ಟಿ.ಖಾದರ್ ಮಾನವೀಯತೆ ಮೆರೆದರು.
ಮಂಗಳೂರಿನ ಪಂಪುವೆಲ್-ನಂತೂರು ಸರ್ಕಲ್ ಮಧ್ಯೆ ರಸ್ತೆಯಲ್ಲೇ ಶುಕ್ರವಾರ ಈ ಕಾರು ಆಕಸ್ಮಿಕ ಬೆಂಕಿ ಹಿಡಿದು ಹೊತ್ತಿ ಉರಿಯುತ್ತಿತ್ತು. ಕಾರಿನಲ್ಲಿ ಚಾಲಕ ಸೇರಿ ಐವರು ಇದ್ದರು.
ಇದೇ ಸಂದರ್ಭ ಮುಂಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆಹಾರ ಸಚಿವರಾದ ಯು.ಟಿ.ಖಾದರ್ ಅದೇ ರಸ್ತೆಯಾಗಿ ಬೋಳಿಯಾರ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಶಬರಿಮಲೆ ಭಕ್ತರ ಇಂಡಿಕಾ ಕಾರು ಉರಿಯುವುದನ್ನು ಕಂಡ ಸಚಿವರು ತಕ್ಷಣ ಸ್ಥಳಕ್ಕೆ ತೆರಳಿ. ಅಗ್ನಿಶಾಮಕದಳಕ್ಕೆ ಫೋನಾಯಿಸಿದರು. ಬಳಿಕ ಕಾರಿನೊಳಗಿದ್ದ ಹುಬ್ಬಳ್ಳಿಯ ಶಬರಿಮಲೆ ಭಕ್ತರನ್ನು ಹೊರಗೆಳೆದು ಕಾರಿಗೆ ನೀರು ಸುರಿದು ಬೆಂಕಿ ನಂದಿಸುವಲ್ಲಿ ಸಫಲರಾದರು. ಕಾರು ಭಾಗಶಃ ಭಸ್ಮವಾಗಿದೆ. ಸಚಿವರು ಇಲ್ಲದೇ ಇರುತ್ತಿದ್ದರೆ ಕಾರೊಳಗಿದ್ದವರ ಜೀವಕ್ಕೆ ಅಪಾಯವಾಗುವುದಲ್ಲದೆ ಕಾರು ಸಂಪೂರ್ಣ ಉರಿಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎಲ್ಲವೂ ನಂದಿದ ಬಳಿಕ ಅಗ್ನಿಶಾಮಕದಳದ ವಾಹನ ಬಂತು..
ಈ ಸಂದರ್ಭ ಸಚಿವ ಯು.ಟಿ.ಖಾದರ್ ಅವರಿಗೆ ದೀಪಕ್ ಪಿಲಾರ್, ಸುರೇಶ್ ಶಕ್ತಿ, ಜೋಸೆಫ್, ಪಿಯುಸ್, ಎನ್ನೆಸ್ ಕರೀಂ, ಸಿರಾಜ್ ಕಿನ್ಯ, ರಫೀಕ್ ಅಂಬ್ಲಮೊಗರು, ಸಚಿವರ ಆಪ್ತ ಸಹಾಯಕ ಲಿಬ್ಝತ್ ನೆರವಾಗುವ ಮೂಲಕ ಹೆಚ್ಚಿನ ಅಪಾಯವನ್ನು ತಪ್ಪಿಸಿದರು. ಕಾರಲ್ಲಿದ್ದ ಶಬರಿಮಲೆ ಭಕ್ತರಿಗೆ ರಾತ್ರಿಯ ಊಟದ ವ್ಯವಸ್ಥೆ ಮಾಡಿ ಊರಿಗೆ ತೆರಳಲು ಬಸ್ ಟಿಕೆಟ್ ತೆಗೆದುಕೊಟ್ಟರು ಎಂದು www.bantwalnews.com ಗೆ ರಶೀದ್ ವಿಟ್ಲ ಮಾಹಿತಿ ನೀಡಿದ್ದಾರೆ
Be the first to comment on "ಬೆಂಕಿ ಹೊತ್ತಿದ ಕಾರಿನಲ್ಲಿದ್ದ ಶಬರಿಮಲೆ ಯಾತ್ರಿಗಳ ರಕ್ಷಿಸಿದ ಸಚಿವ ಖಾದರ್"