bantwalnews.com report
ಬಿ.ಸಿ.ರೋಡಿನ ರಂಗೋಲಿಯ ರಾಜಾಂಗಣ ಸಭಾಂಗಣದಲ್ಲಿ ಶನಿವಾರ ಜನವರಿ 14ರಂದು ಕಲಾನಿಕೇತನ ನಾಟ್ಯಶಾಲೆ ವತಿಯಿಂದ ಕಲಾ ಪರ್ವ 2017 ನಡೆಯಲಿದೆ.

file photo
ಸಂಜೆ 5 ಗಂಟೆಯಿಂದ ವಿದ್ಯಾರ್ಥಿಗಳಿಂದ ನೃತ್ಯಪ್ರಸ್ತುತಿ, ಬಳಿಕ ಸಂಜೆ 6.30ರಿಂದ ಸಭಾ ಕಾರ್ಯಕ್ರಮ ನಡೆಯುವುದು. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕುದ್ಕಾಡಿ ವಿಶ್ವನಾಥ ರೈ ದೀಪಪ್ರಜ್ವಲನಗೈಯುವರು. ಎಸ್.ವಿ.ಎಸ್.ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಡಾ.ನಾಗವೇಣಿ ಮಂಚಿ ಅಧ್ಯಕ್ಷತೆ ವಹಿಸುವರು ಎಂದು ನೃತ್ಯಗುರು ವಿದುಷಿ ವಿದ್ಯಾ ಮನೋಜ್ ತಿಳಿಸಿದ್ದಾರೆ. ಕಲಾನಿಕೇತನ ನಾಟ್ಯಶಾಲೆಯು ಕಲ್ಲಡ್ಕ, ಬೆಳ್ತಂಗಡಿ, ಹಾಗೂ ಬಿ.ಸಿ.ರೋಡಿನಲ್ಲಿ ನೃತ್ಯತರಬೇತಿ ನೀಡುತ್ತಿದೆ.
Be the first to comment on "ಬಿ.ಸಿ.ರೋಡಿನಲ್ಲಿ 14ರಂದು ಕಲಾಪರ್ವ 2017"