ಆಳ್ವಾಸ್ ವಿರಾಸತ್‌ಗೆ ಪೂರಕವಾಗಿ ನಡೆಯುತ್ತಿರುವ ಆಳ್ವಾಸ್ ಶಿಲ್ಪ ವಿರಾಸತ್ ನಲ್ಲಿ ಮರ ಹಾಗೂ ಲೋಹದ ಕೆತ್ತನೆಗಳು ಗಮನಸೆಳೆಯುತ್ತಿದೆ. ಕರಾವಳಿ ಕಲಾವಿದರನ್ನು ಒಳಗೊಂಡಂತೆ ರಾಷ್ಟ್ರಮಟ್ಟದ 13 ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಶಿಬಿರದ ಮೂಲಕ ಪ್ರದರ್ಶಿಸುತ್ತಿದ್ದಾರೆ.
ಹಿರಿಯ ಕಲಾವಿದ ರಾಮಮೂರ್ತಿ ಎಂ. ಶಿಬಿರದ ನಿರ್ದೇಶಕರಾಗಿದ್ದು, ಶಿವಕುಮಾರ್ ಜಿ.ವಿ(ಬೆಂಗಳೂರು), ಮಂಜುನಾಥ ಆಚಾರ್ಯ(ಚಿತ್ರದುರ್ಗ), ಸಿದ್ದರೂಡ(ಬಳ್ಳಾರಿ), ಶಿಲ್ಪಿ ಚಿದಾನಂದ(ವಿಟ್ಲ, ದ.ಕ), ಶಶಿಕುಮಾರ್ ಉಜಿರೆ(ದ.ಕ), ಕೃಷ್ಣ ಗುಡಿಗಾರ್(ಕುಂದಾಪುರ), ಕುಮಾರ್(ಕುಂದಾಪುರ), ಯತೀಶ್(ಕುಂದಾಪುರ) ಮರದ ಕತ್ತನೆಯ ಮೂಲಕ ಕಲೆಯನ್ನು ಅರಳಿಸುತ್ತಿದ್ದಾರೆ. ಛತೀಸ್‌ಗಡ ಕಲಾವಿದರಾದ ಬಂಶಿಲಾಲ್ ಬೈದ್, ರವಿಂದ್ ನಾಗ್, ಅಮೀರ್ ನಾಗ್, ಆಕಾಶ್ ನಾಗ್ ಲೋಹದ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9901114843 (ಭಾಸ್ಕರ ನೆಲ್ಯಾಡಿ, ಶಿಬಿರದ ಮೇಲ್ವಿಚಾರಕರು)
Be the first to comment on "ಶಿಲ್ಪಸಿರಿಯಲ್ಲಿ ರಾಷ್ಟ್ರಮಟ್ಟದ ಕಲಾವಿದರ ಕಲಾಕೃತಿಗಳು"