ಪುತ್ತಿಗೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಬಯಲು ರಂಗಮಂದಿರದಲ್ಲಿ ಆಳ್ವಾಸ್ ವಿರಾಸತ್ 2017ಆರಂಭಗೊಂಡಿದೆ.
ಜಾಹೀರಾತು
23ನೇ ವರ್ಷದ ಆಳ್ವಾಸ್ ವಿರಾಸತ್‌ನ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಸಾಂಪ್ರದಾಯಿಕ ವರ್ಣರಂಜಿತ ಮೆರವಣಿಗೆಗೆ ಚಾಲನೆ ದೊರಕಿತು.
ಶಂಖದ ನಾದ, ಕೊಂಬಿನ ಮೈನವಿರೇಳಿಸುವ ಧ್ವನಿ, ಇವುಗಳ ಮಧ್ಯೆ ಮಂಗಳೂರಿನ ಚೆಂಡೆ ವಾದನದ ಸೊಗಸು ನೆರೆದವರ ಮನಸೂರೆಗೊಳಿಸಿತು. ಶ್ರೀಲಂಕಾದ ನೃತ್ಯ ಕಲಾವಿದರು, ಕಲಶ, ಸಾಕ್ಸೊಪೋನ್ ಹಾಗೂ ಕದಾನಿ, ವಿವಿಧ ರಾಜ್ಯಗಳ ವೈವಿದ್ಯಮಯ ಕಲಾಪ್ರಕಾರಗಳನ್ನು ಮೆರವಣಿಗೆಯಲ್ಲಿ ಪರಿಚಯಿಸಲಾಯಿತು. ಸುಮಾರು 9 ಕಲಾಪ್ರಕಾರಗಳು ಮೆರವಣೀಗೆಯಲ್ಲಿ ಪ್ರದರ್ಶನ ನೀಡಿ ಸಭಿಕರ ಗಮನಸೆಳೆದರು.
ಆಳ್ವಾಸ್ ವಿರಾಸತ್‌ಗಾಗಿ ಸಿದ್ಧಗೊಂಡಿರುವ ಪ್ರಶಾಂತ ವಾತಾವರಣದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಗುತ್ತಿನ ಮನೆಯ ಪ್ರವೇಶಧ್ವಾರ ಆವರಣದಿಂದ ಆರಂಭಗೊಂಡ ಕಲಾ ಮೆರವಣಿಗೆ ಸುಮಾರು 15 ನಿಮಿಷ ಹೊಸ ಸಾಂಸ್ಕೃತಿಕ ಲೋಕವನ್ನು ಸೃಷ್ಟಿ ಮಾಡಿತು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಆಳ್ವಾಸ್ ವಿರಾಸತ್ ವೈಭವ ಆರಂಭ"
Be the first to comment on "ಆಳ್ವಾಸ್ ವಿರಾಸತ್ ವೈಭವ ಆರಂಭ"