ಬಂಟ್ವಾಳ ಗೃಹರಕ್ಷಕ ದಳದ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಕಲ್ಲಡ್ಕ ಸಮೀಪ ನರಹರಿ ಪರ್ವತದಲ್ಲಿ ಶ್ರಮದಾನ ನಡೆಸಿ, ಪರಿಸರ ಸ್ವಚ್ಛಗೊಳಿಸಿದರು.
ಜಾಹೀರಾತು
ಸುಮಾರು ಐವತ್ತರಷ್ಟಿದ್ದ ಸಿಬ್ಬಂದಿ, ಶ್ರೀ ಸದಾಶಿವ ದೇವಸ್ಥಾನಕ್ಕೆ ತೆರಳುವ ಮೆಟ್ಟಿಲುಗಳನ್ನು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಚೊಕ್ಕಟಗೊಳಿಸಿದರು. ಇದೇ ಸಂದರ್ಭ ಎಪಿಎಂಸಿ ಚುನಾವಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಲೀ ಮೋಹನ ಚೂಂತಾರು, ಬಂಟ್ವಾಳ ಗೃಹರಕ್ಷಕ ದಳದ ಘಟಕಾಧಿಕಾರಿ ಡಿ.ಆರ್.ಶ್ರೀನಿವಾಸ ಆಚಾರ್ಯ, ಕ್ಯಾನ್ ಪಾಲ್ ಕಾರ್ಯದರ್ಶಿ ಎ.ಎಸ್.ಭಟ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದು, ಮಾರ್ಗದರ್ಶನ ನೀಡಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಗೃಹರಕ್ಷಕ ಸಿಬ್ಬಂದಿಯಿಂದ ನರಹರಿ ಪರ್ವತದಲ್ಲಿ ಸ್ವಚ್ಛತಾ ಅಭಿಯಾನ"