ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಮೂರು ದಿನ ನಡೆಯುವ ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಸಮ್ಮೇಳನ ಶುಕ್ರವಾರ ವೈಭವದಿಂದ ಉದ್ಘಾಟನೆಗೊಂಡಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಆಳ್ವಾಸ್ ವಿರಾಸತ್‌ಗೆ ಚಾಲನೆ ನೀಡಿದರು. ದೇಶದಲ್ಲಿ ಸಮಾನತೆಯ ಕೂಗು ಗಮನಾರ್ಹವಾಗಿರುವಾಗ ಹೃದಯ ವೈಶಾಲ್ಯತೆಯಿಂದ ಸಮಾನತೆಯ ಭಾವ ಮೂಡಬೇಕಾಗಿದೆ. ಕಲೆಯ ಮೂಲಕ ಶಿಸ್ತು, ಸಂಸ್ಕಾರಯುತ ಜೀವನದಿಂದ ಯುವ ಮನಸ್ಸುಗಳನ್ನು ಸಂಸ್ಕೃತಿವಂತರಾಗಿಸಬಹುದು ಎಂದರು.
ವಿರಾಸತ್ ಪ್ರಶಸ್ತಿ ಪ್ರದಾನ:
ಖ್ಯಾತ ಭರತ ನಾಟ್ಯ ಕಲಾವಿದ ಪದ್ಮಭೂಷಣ ವಿ.ಪಿ.ಧನಂಜಯನ್ ಅವರಿಗೆ ಇದೇ ಸಂದರ್ಭದಲ್ಲಿ ಆಳ್ವಾಸ್ ವಿರಾಸತ್ ಪ್ರಶಸ್ತಿ 2017 ಪ್ರದಾನ ಮಾಡಲಾಯಿತು. ಒಂದು ಲಕ್ಷ ರೂ ಗೌರವ ನಗದು ಸೇರಿದಂತೆ ಶಾಲು, ಹಾರ, ಫಲಪುಷ್ಪ, ಸಮ್ಮಾನ ಪತ್ರ, ಸ್ಮರಣಿಕೆಯೊಂದಿಗೆ ಅವರನ್ನು ಸಮ್ಮಾನಿಸಲಾಯಿತು.
ಶಾಸಕ ಕೆ. ಅಭಯಚಂದ್ರ ಜೈನ್, ಸಾಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕೆನರಾ ಬ್ಯಾಂಕ್ ಜಿ.ಎಂ. ವಿರೂಪಾಕ್ಷ, , ಕರ್ನಾಟಕ ಬ್ಯಾಂಕ್‌ನ ಸಿಇಒ ಜಯರಾಮ್ ಭಟ್, ಎಸ್.ಡಿ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಕೆ.ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಅದಾನಿ ಯು.ಪಿ.ಸಿ.ಎಲ್‌ನ ಕಾರ್ಯಕಾರಿ ನಿರ್ದೇಶಕ ಕಿಶೋರ್ ಆಳ್ವ, ತೇಜಸ್ವೀ ಅನಂತ ಕುಮಾರ್, ಶಾಂತಾ ಧನಂಜಯನ್, ಉದ್ಯಮಿಗಳಾದ ಕೆ. ಶ್ರೀಪತಿ ಭಟ್, ದೇವಿ ಪ್ರಸಾದ್ ಶೆಟ್ಟಿ, ಮುಸ್ತಾಫಾ ಎಸ್.ಎಂ, ಪ್ರಕಾಶ್ ಶೆಟ್ಟಿ, ಅನಿವಾಸಿ ಉದ್ಯಮಿ ರಾನ್ ಸಾಮರ್‍ಸ್ , ವರುಣ್ ಜೈನ್, ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಪದ್ಮನಾಭ ಶೆಣೈ ಸಮ್ಮಾನಿತರನ್ನು ಪರಿಚಯಿಸಿದರು. ಪ್ರಾಧ್ಯಾಪಕಿ ದೀಪಾ ರತ್ನಾಕರ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭಕ್ಕೂ ಮೊದಲು ಮೆರವಣಿಗೆಯಲ್ಲಿ ಗಣ್ಯರನ್ನು ಸಭಾಂಗಣಕ್ಕೆ ಕರೆತರಲಾಯಿತು. ಆಳ್ವಾಸ್ ವಿದ್ಯಾರ್ಥಿಗಳ ಆಶಯ ಗೀತೆ ಮತ್ತು ವಂದೇ ಮಾತರಂ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು
Be the first to comment on "ಆಳ್ವಾಸ್ ವಿರಾಸತ್ ಉದ್ಘಾಟನೆ"