www.bantwalnews.com report
ವಿವೇಕಾನಂದ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ ಸ್ಥಾಪಿಸಲಾದ ನೂರಡಿ ಎತ್ತರದ ಟ್ರಾನ್ಸ್ ಮಿಶನ್ ಗೋಪುರ, ಮ್ಯೂಸಿಕ್ ಟೈಪ್, ಟಾಕ್ ಟೈಪ್ ಮಲ್ಟಿಪರ್ಪಸ್ ಸ್ಟುಡಿಯೋದೊಂದಿಗೆ ಸಜ್ಜುಗೊಂಡಿರುವ ರೇಡಿಯೋ ಪಾಂಚಜನ್ಯವು 12ರಂದು ಪುತ್ತೂರಿನ ವಿವೇಕಾನಂದ ಕ್ಯಾಂಪಸ್ ನಲ್ಲಿ ಲೋಕಾರ್ಪಣೆಗೊಳ್ಳುವುದು.
ಜಾಹೀರಾತು
ಕೇಂದ್ರ ವಾಣಿಜ್ಯ, ಕೈಗಾರಿಕೆ, ಹಣಕಾಸು ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸುವರು. ವಿವೇಕಾನಂದ ಕ್ಯಾಂಪಸ್ ನಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯುವುದು. ಮಾಜಿ ಶಾಸಕ ಕೆ. ರಾಮ ಭಟ್ ಗೌರವ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಪ್ರಚಾರ ಪ್ರಮುಖ್ ಪ್ರದೀಪ್ ದಿಕ್ಸೂಚಿ ಭಾಷಣ ಮಾಡುವರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಪುತ್ತೂರಿನಲ್ಲಿಂದು ರೇಡಿಯೋ ಪಾಂಚಜನ್ಯ ಲೋಕಾರ್ಪಣೆ, ವಿವೇಕಾನಂದ ಜಯಂತಿ"