bantwalnews.com report
ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿ ಎರಡು ದಿನಗಳ ಕಾಲ ನಡೆಯುವ ಕೃಷಿ ಉತ್ಸವ ಸಮಾರೋಪ ಗುರುವಾರ ನಡೆಯಲಿದೆ.
2ರಂದು ನಡೆಯಲಿರುವ ವ್ಯಸನಮುಕ್ತ ಕುಟುಂಬ ವಿಚಾರಗೋಷ್ಠಿಯಲ್ಲಿ ದ.ಕ ಜಿ. ಪಂ.ನ ಸದಸ್ಯ ಮಂಜುಳಾ ಮಾಧವ ಮಾವೆ ಅಧ್ಯಕ್ಷತೆ ವಹಿಸಲಿದ್ದು, ಧರ್ಮಸ್ಥಳ ಜ.ಜಾ.ವೇ.. ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ವಿಷಯ ಮಂಡನೆ ಮಾಡಲಿದ್ದಾರೆ. ಪಾರ್ವತಿ ವಿಟ್ಲ, ಮಾಜಿ ಶಾಸಕ ರುಕ್ಮಯ ಪೂಜಾರಿ, ಬಂಟ್ವಾಳ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ.ಸಿ. ಭಂಡಾರಿ, ಜಿ.ಪಂ.ನ ಸದಸ್ಯ ಮಮತಾ ಗಟ್ಟಿ, ಮಾಜಿ ಜಿ. ಪಂ.ನ ಸದಸ್ಯ ಸುಲೋಚನಾ ಜಿ.ಕೆ ಭಟ್ ಉಪಸ್ಥಿತರಿರುವರು.
ಸಮಗ್ರ ತೋಟಗಾರಿಕಾ ಬೆಳೆಗಳು ವಿಚಾರ ಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್. ಆರ್ ಯೋಗೀಶ್ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ತಾಂತ್ರಿಕ ಅಧಿಕಾರಿ ಪುರಂದರ ವಿಷಯ ಮಂಡನೆ ಮಾಡಲಿದ್ದಾರೆ. ಪ್ರಗತಿಪರ ಕೃಷಿಕ ಬಿ.ಎಸ್. ಚೆನ್ನಪ್ಪ ಪೂಜಾರಿ, ಜಿ.ಪಂ.ನ ಸದಸ್ಯ ಪದ್ಮಶೇಖರ ಜೈನ್, ಜಯಶಂಕರ ಬಾಸ್ರಿತ್ತಾಯ, ಬಂಟ್ವಾಳ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಕಿರಣ ಹೆಗ್ಡೆ ಉಪಸ್ಥಿತರಿರುವರು
ಲಾಭದಾಯಕ ಹೈನೋದ್ಯಮ ವಿಚಾರ ಗೋಷ್ಠಿಯಲ್ಲಿ ಮಾಣಿ ಪಶುವೈದ್ಯ ಆಸ್ಪತ್ರೆಯ ಸಕಾಯಕ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಟಿ.ಜಿ.ಅಧ್ಯಕ್ಷತೆ ವಹಿಸಲಿದ್ದು, ಬೆಂಜನಪದವು ಪಶುವೈದ್ಯಾಧಿಕಾರಿ ಡಾ. ರವಿಕುಮಾರ್ ಎಂ ವಿಷಯ ಮಂಡನೆ ಮಾಡಲಿದ್ದಾರೆ. ಪ್ರಗತಿಪರ ಕೃಷಿಕ ಸುರೇಶ ಗೌಡ ಪುಣಚ, ಜಿ.ಪಂ.ನ ಸದಸ್ಯ ಎಂ.ಎಸ್. ಮಹಮ್ಮದ್, ಬಂಟ್ವಾಳ ಮಾಜಿ ಅಧ್ಯಕ್ಷ ಕೈಯೂರು ನಾರಾಯಣ ಭಟ್, ಬಂಟ್ವಾಳ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಉಮೇಶ ಆಚಾರ್ಯ ಉಪಸ್ಥಿತರಿರುವರು.
ಸಂಜೆ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಕೃಷಿ ಉತ್ಸವ ಸಮಿತಿಯ ಅಧ್ಯಕ್ಷ ರೊನಾಲ್ಡ್ ಡಿ’ಸೋಜಾ ಅಧ್ಯಕ್ಷತಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಆಹಾರ ಸಚಿವ ಯು.ಟಿ.ಖಾದರ್, ಸಂಸದೀಯ ಕಾರ್ಯದರ್ಶಿ ಶಕುಂತಳಾ ಟಿ.ಶೆಟ್ಟಿ, ದ.ಕ ಜಿ.ಪಂ.ನ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಹಶೀಲ್ದಾರ ಪುರಂದರ ಹೆಗ್ಡೆ, ಶ್ರೀ.ಕ್ಷೇ.ಧ. ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿದೇರ್ಶಕ ಎಲ್.ಎಚ್. ಮಂಜುನಾಥ್, ಬಂಟ್ವಾಳ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಾರಂತ್, ಮಂಗಳೂರು ಕ್ಯಾಂಪ್ಕೊ ಲಿಮಿಟೆಡ್‌ನ ಅಧ್ಯಕ್ಷ ಎಸ್. ಸತೀಶ್‌ಚಂದ್ರ, ಬಂಟ್ವಾಳದ ಸೇಸಪ್ಪ ಕೋಟ್ಯಾನ್, ನರಿಕೊಂಬುವಿನ ಅಧ್ಯಕ್ಷ ನಿತ್ಯಾನಂದ ಸಪಲ್ಯ, ಬಂಟ್ವಾಳ ರೋಟರಿ ಕ್ಲಬ್ ನ ಅಧ್ಯಕ್ಷ ರಿತೇಶ್ ಬಾಳಿಗಾ, ಸದಾನಂದ ಗೌಡ ಉಪಸ್ಥಿತರಿರುವರು. ಚಿಣ್ಣರ ಲೋಕ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಬಿ.ಸಿ.ರೋಡಿನ ಎಕ್ಟ್ರೀಮ್ ಡ್ಯಾನ್ಸ್ ಕ್ರೀವ್ಸ್‌ರವರಿಂದ ನೃತ್ಯ ವೈವಿಧ್ಯ ನಡೆಯಲಿದೆ.
Be the first to comment on "ಇಂದು ಕೃಷಿ ಉತ್ಸವ ಸಮಾರೋಪ"