ಕುದ್ದುಪದವು ಜಂಕ್ಷನ್ ನಲ್ಲಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸವಾರ ಗಾಯಗೊಂಡಿದ್ದಾರೆ.
ಅಡ್ಯನಡ್ಕ ಸಮೀಪ ಚೌರ್ಕಾಡು ನಿವಾಸಿ ಮಜೀದ್ ಗಾಯಗೊಂಡವರು. ವಿಟ್ಲದಿಂದ ಪಕಳಕುಂಜಕ್ಕೆ ತೆರಳಿತ್ತಿದ್ದ ಸರ್ಕಾರಿ ಬಸ್ಸು ಕುದ್ದುಪದವು ಜಂಕ್ಷನ್‌ನಲ್ಲಿ ತಿರುವ ಸಮಯ ಅಡ್ಯನಡ್ಕದಿಂದ ವಿಟ್ಲ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಘಟನೆಯ ತೀವ್ರತೆಗೆ ಬೈಕ್ ಬಸ್ಸಿನಡಿಯಲ್ಲಿ ಸಿಲುಕಿ ಎಳೆದೊಯ್ದಿದೆ. ಸವಾರ ರಸ್ತೆಯ ಬದಿಗೆ ಎಸೆಯಲ್ಪಟ್ಟಿದ್ದು, ಗಂಬೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಸ್ – ಬೈಕ್ ಡಿಕ್ಕಿ, ಸವಾರ ಗಾಯ"