ಅರುವತ್ತು ವರ್ಷಗಳ ಹಿಂದೆಯೇ ತುಳು ನಿರ್ಲಕ್ಷ್ಯ

ತುಳುನಾಡಿನಲ್ಲಿರುವವರು ಎಲ್ಲರೂ ತುಳುವರು. ಅದರಲ್ಲೂ ತುಳು ಭಾಷೆಗೆ ತನ್ನದೇ ಆದ ಹಿರಿಮೆ ಇದೆ. ನಮ್ಮ ಭಾಷೆ ಉಳಿವಿಗೆ ಪಣ ತೊಡದಿದ್ದರೆ ತುಳು ಇತಿಹಾಸ ಪುಟ ಸೇರಬಹುದು. ಹಾಗಾಗಬಾರದು.

ಜಾಹೀರಾತು
  • ಬಿ.ತಮ್ಮಯ್ಯ

www.bantwalnews.com ಅಂಕಣನಮ್ಮ ಭಾಷೆ

ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ಮಾತನಾಡುತ್ತಿರುವ ಲೇಖಕರು

ತುಳು ಸೂಕ್ಷ್ಮ ಅಕ್ಷರಗಳು

ಭಾಷೆಯ ಆಧಾರದಲ್ಲಿ ರಾಜ್ಯಗಳು 1956ರಲ್ಲಿ ರಚನೆಯಾದ ಕಾನೂನಿನಲ್ಲಿ ಈ ಅಂಶ ವ್ಯಕ್ತವಾಗಿತ್ತು.

ಯಾವುದೇ ಭಾಷೆ ಮೂರು ಜಿಲ್ಲೆಗಳಲ್ಲಿ ಶೇ.70ರಿಂದ ಹೆಚ್ಚು ಮಾತನಾಡುತ್ತಾರೋ, ಆ ನಾಡನ್ನು ರಾಜ್ಯ ಎಂದು ಪರಿಗಣಿಸಬೇಕು. ಆದರೆ ಇಲ್ಲಿ ತುಳುವಿಗೆ ಅನ್ಯಾಯವಾಗಿದೆ. ಈಗ ಕರ್ನಾಟಕ ರಾಜ್ಯ ಸರಕಾರ ತುಳುವಿಗಾಗಿ ತುಳು ಸಾಹಿತ್ಯ ಅಕಾಡಮಿ ಸ್ಥಾಪಿಸಿದೆ. ತುಳುವನ್ನು ಮೂರನೇ ಭಾಷೆಯಾಗಿ ಕಲಿಯುವ ಅವಕಾಶ ನೀಡಿದೆ. ಒಂದು ಭಾಷೆಗೆ ಒಂದು ಸಂಸ್ಕೃತಿ, ಒಂದು ಲಿಪಿ ಇರಬೇಕು. ಅದೆಲ್ಲ ಇದ್ದರೂ ನಮ್ಮ ತುಳು ಅನಾದರಕ್ಕೆ ಒಳಗಾಗಿರುವುದು ನೋವಿನ ವಿಚಾರ.

ಜಾಹೀರಾತು

ಇತ್ತೀಚೆಗೆ ಜರ್ಮನಿಯವರು ಜಗತ್ತಿನ ಭಾಷೆಗಳಲ್ಲಿ ಹಿರಿಯ ಹತ್ತು ಭಾಷೆಗಳನ್ನು ಸಂಶೋಧನೆ ಮೂಲಕ ಪತ್ತೆ ಮಾಡಿದರು. ಅವುಗಳ ವಿವರ ಹೀಗಿದೆ.

10   ಲ್ಯಾಟಿನ್ ಭಾಷೆ   75 (ಕ್ರಿ.ಪೂ.)

9    ಅಮೆನಿಯನ್ ಭಾಷೆ  450 (ಕ್ರಿ.ಪೂ.)

ಜಾಹೀರಾತು

8   ಕೊರಿಯನ್ ಭಾಷೆ   600 (ಕ್ರಿ.ಪೂ.)

7   ಹೆಬ್ರು ಭಾಷೆ   1000 (ಕ್ರಿ.ಪೂ.)

6   ಅರಮಾನಿಯನ್ ಭಾಷೆ   1000 (ಕ್ರಿ.ಪೂ.)

ಜಾಹೀರಾತು

5   ಚೈನೀಸ್ ಭಾಷೆ   1200 (ಕ್ರಿ.ಪೂ.)

4   ಗ್ರೀಕ್ ಭಾಷೆ   1450 (ಕ್ರಿ.ಪೂ.)

3   ಈಜಿಪ್ಶಿಯನ್ ಭಾಷೆ   2000 (ಕ್ರಿ.ಪೂ.)

ಜಾಹೀರಾತು

2   ಸಂಸ್ಕೃತ ಭಾಷೆ   3000 (ಕ್ರಿ.ಪೂ.)

1   ತಮಿಳುಮೂಲ ಭಾಷೆ   5000 (ಕ್ರಿ.ಪೂ.)

ಇಲ್ಲಿ ತಮಿಳುಮೂಲ ಭಾಷೆ ಎಂದರೆ ತುಳು. ಆದುದರಿಂದ ಜಗತ್ತಿಗೇ ತುಳು ಮೊದಲ ಭಾಷೆ. ಇಂಥ ಭಾಷೆಯ ಬಗ್ಗೆ ನಮಗೆ ಪ್ರೀತಿ, ಅಭಿಮಾನ, ಹೆಮ್ಮೆ ಇರಬೇಡವೇ, ಇವತ್ತು ಜಗತ್ತಿನ ಭಾಷೆ ಇಂಗ್ಲೀಷನ್ನು ಬರೆಯುವುದು ರೋಮನ್ ಲಿಪಿಯಲ್ಲಿ. ದೇವಭಾಷೆ ಎನಲಾದ ಸಂಸ್ಕೃತವನ್ನು ಬರೆಯುವುದು ದೇವನಾಗರಿ ಲಿಪಿಯಲ್ಲಿ. ಆದರೆ ಎಲ್ಲವೂ ಇದ್ದು ಇಲ್ಲವಾದ ಅನಾಥವಾದ ತುಳುವಿನ ಬಗ್ಗೆ ತುಳುವಿನವರಿಗೇ ಕನಿಕರ ಬೇಡವೇ, ತುಳುವನ್ನು ಉಳಿಸಬೇಕಾದರೆ ಯಾರೋ ಮನಸ್ಸು ಮಾಡಬೇಕಾದ ಅಗತ್ಯ ಇಲ್ಲ. ಅದನ್ನು ತುಳುವರೇ ಉಳಿಸಬೇಕಾಗಿದೆ.

ಜಾಹೀರಾತು

ಅದಕ್ಕಾಗಿ ತುಳುವರು ಟೊಂಕ ಕಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇದೆ.

(ಮುಂದಿನ ಭಾಗದಲ್ಲಿ: ಹೊರರಾಜ್ಯ, ದೇಶಗಳಲ್ಲಿ ತುಳುವಿನ ಅಸ್ತಿತ್ವ)

 

ಜಾಹೀರಾತು

ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

B Thammayya
ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

Be the first to comment on "ಅರುವತ್ತು ವರ್ಷಗಳ ಹಿಂದೆಯೇ ತುಳು ನಿರ್ಲಕ್ಷ್ಯ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*