ನೇತ್ರಾವತಿ ಒಡಲಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಆರೋಪ ಕೇಳಿಬರುತ್ತಿರುವುದು ಇಂದುನಿನ್ನೆಯ ವಿಷಯವಲ್ಲ. ಆಗಾಗ್ಗೆ ಇಲ್ಲಿಗೆ ದಾಳಿ ನಡೆಸುವುದು ಹಾಗೂ ಮತ್ತೆ ಅಂಥದ್ದೇ ಕೆಲಸ ಮುಂದುವರಿಯುತ್ತಿರುವುದು ಈಗ ಸಾಮಾನ್ಯ ವಿಷಯವಾಗಿ ಪರಿವರ್ತಿತವಾಗಿದೆ.
ಆದರೆ ಕೆಲ ಗ್ರಾಮಗಳಲ್ಲಿ ಸ್ಥಳೀಯರೇ ಮರಳು ದಂಧೆ ಅಕ್ರಮ ವಹಿವಾಟಿನ ವಿರುದ್ಧ ತಿರುಗಿಬಿದ್ದಿದ್ದಾರೆ. ಇದರಿಂದ ಅವರು ಪ್ರಾಣಭೀತಿಗೆ ಒಳಗಾಗಿದ್ದೂ ಇದೆ. ಆದರೂ ಅಕ್ರಮ ಮರಳುದಂಧೆಕೋರರ ವಿರುದ್ಧ ಸೆಡ್ಡು ಹೊಡೆದು ನಿಂತಿರುವ ಊರವರು, ಆಗಾಗ್ಗೆ ಈ ಬಗ್ಗೆ ಎಚ್ಚರ ನೀಡುತ್ತಲೇ ಇರುತ್ತಾರೆ.
ಇಂಥದ್ದೇ ಒಂದು ಘಟನೆ ಮಂಗಳವಾರ ನಡೆಯಿತು. ಬಿಳಿಯೂರು ಕೊಳೆಂಚಿಯಡ್ಕ ಎಂಬಲ್ಲಿ ನೇತ್ರಾವತಿ ತಟದಲ್ಲಿ ಅಕ್ರಮವಾಗಿ ಮರಳುಗಾರಿಕೆಯಲ್ಲಿ ತೊಡಗಲು ಉಪಯೋಗಿಸಲಾಗಿದೆ ಎನ್ನಲಾದ ಮಿನಿ ಲಾರಿಯನ್ನು ನಾಗರಿಕರು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ. ವಾರದ ಹಿಂದೆ ನಾಗರೀಕರೇ ಒಂದು ಲಾರಿಯನ್ನು ಹಿಡಿದು ಪುತ್ತೂರು ಸಹಾಯಕ ಅಧೀಕ್ಷಕ ರಿಷ್ಯಂತ್ ಅವರಿಗೆ ಮಾಹಿತಿ ನೀಡಿ ಇಲಾಖೆಗೆ ಒಪ್ಪಿಸಿದ್ದರು.
Be the first to comment on "ಮರಳು ಅಕ್ರಮ ಸಾಗಾಟಕ್ಕೆ ಬಳಸಿದ ಲಾರಿ ವಶಕ್ಕೆ"