ಬಂಟ್ವಾಳ ಜೆಸಿಐಯ ನೂತನ ಅಧ್ಯಕ್ಷರಾಗಿ ಡಾ. ಬಾಲಕೃಷ್ಣ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಕಾರ್ಯದರ್ಶಿಯಾಗಿ ಉದ್ಯಮಿ ಸದಾನಂದ ಬಂಗೇರ, ಕೋಶಾಧೀಕಾರಿಯಾಗಿ ಉಪನ್ಯಾಸಕ ಚೇತನ್ ಮುಂಡಾಜೆ ಆಯ್ಕೆಯಾದರು. ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ರಾಜೇಂದ್ರ, ದಯಾನಂದ ರೈ, ಕೀರ್ತಿರಾಜ್, ಯತೀಶ್ ಕರ್ಕೆರಾ, ಉಮೇಶ್‌ಮೂಲ್ಯ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.7ರಂದು ಬಿ.ಸಿ.ರೋಡಿನಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ಜೆಸಿಐನ ವಲಯಾಧ್ಯಕ್ಷ ಸಂತೋಷ್ ಜಿ. ಭಾಗವಹಿಸುವರು. ಉಪಾಧ್ಯಕ್ಷ ಪುಷೋತ್ತಮ ಶೆಟ್ಟಿ ಪದಗ್ರಹಣ ನೆರವೇರಿಸುವರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಂಟ್ವಾಳ ಜೇಸಿ ಅಧ್ಯಕ್ಷರಾಗಿ ಡಾ. ಬಾಲಕೃಷ್ಣ"