ಬಸ್ ಹಾಗೂ ರಿಕ್ಷಾ ಚಾಲಕರಿಬ್ಬರು ಪ್ರಾಯಾಣಿಕರನ್ನು ಹತ್ತಿಸುವ ವಿಚಾರದಲ್ಲಿ ನಡುರಸ್ತೆಯಲ್ಲಿ ವಾಹನ ನಿಲ್ಲಿಸಿಕೊಂಡು ಗಲಾಟೆ ಮಾಡಿದ ಹಿನ್ನಲೆಯಲ್ಲಿ ಸಂಚಾರಕ್ಕೆ ತೊಂದರೆ ಮಾಡಿದ ಬಗ್ಗೆ ವಿಟ್ಲ ಪೊಲೀಸರು ನೋಟೀಸ್ ನೀಡಿ ವಶಕ್ಕೆ ಪಡೆದ ಘಟನೆ ವಿಟ್ಲ – ಸಾಲೆತ್ತೂರು ರಸ್ತೆಯಲ್ಲಿ ನಡೆದಿದೆ.
ವಿಟ್ಲದಿಂದ ಸಾಲೆತ್ತೂರು ಕಡೆಗೆ ಹೋಗುವ ರಸ್ತೆಯಲ್ಲಿ ಖಾಸಗೀ ಬಸ್ ನಿಲ್ಲಿಸಿ ಜನರನ್ನು ಹತ್ತಿಸಿಕೊಳ್ಳುತ್ತಿತ್ತು. ಇದೇ ಸಮಯಕ್ಕೆ ಹಿಂಬದಿಯಲ್ಲಿದ್ದ ರಿಕ್ಷಾ ಚಾಲಕ ಬಸ್ ಸಾಗುವ ಕಡೆಯ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ. ಇದು ಮಾತಿನ ಚಕಮಕಿಗೆ ಕಾರಣವಾಯಿತು.
ವಿಷಯ ತಿಳಿದ ವಿಟ್ಲ ಪೊಲೀಸರು ವಾಹನ ಸಹಿತ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಬೇರೆ ವಾಹನಗಳಿಗೆ ಸಂಚಾರಕ್ಕೆ ತೊಂದರೆ ಮಾಡಿದ ಎರಡು ವಾಹನದ ಮೇಲೆ ನೋಟೀಸ್ ಜಾರಿಗೊಳಿಸಿದ್ದಾರೆ.
ವಿಟ್ಲ ಉಪನಿರೀಕ್ಷಕ ನಾಗರಾಜ್ ಅವರು ಎರಡೂ ವಾಹನಕ್ಕೆ ನೋಟೀಸ್ ಜಾರಿ ಮಾಡಿದ್ದರಿಂದ ಎರಡೂ ವಾಹನಗಳನ್ನು ದಂಡ ಕಟ್ಟಿ ಬಿಡಿಸಬೇಕಾಯಿತು.
Be the first to comment on "ನಡುರಸ್ತೆಯಲ್ಲೇ ಬಸ್, ಆಟೋ ಚಾಲಕರ ತಕರಾರು"