bantwalnews.com report
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯಡಿ ಜಕ್ರಿಬೆಟ್ಟು ಸಮೀಪ ಹೊಸದಾಗಿ ನಿರ್ಮಿಸಲಾಗುತ್ತಿರುವ ಜಲ ಶುದ್ಧೀಕರಣ ಘಟಕದ ಬಳಿ ಹೊಸ ಕೊಳವೆಮಾರ್ಗಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಇದರ ಕೊಳವೆ ಮಾರ್ಗಗಳು ಹಾಲಿ ಇರುವ ಜಲಶುದ್ಧೀಕರಣಗಾರದ ಸಮೀಪ ಹಾದು ಹೋಗುವುದರಿಂದ ಹೊಸದಾಗಿ ಪೈಪುಗಳನ್ನು ಅಳವಡಿಸುವ ಸಂದರ್ಭದಲ್ಲಿ ಹಾಲಿ ಇರುವ ಕೊಳವೆಮಾರ್ಗದಿಂದ ನೀರು ಪೂರೈಕೆ ವ್ಯತ್ಯಯವಾಗುವ ಸಂಭವವಿದೆ ಎಂದು ಪುರಸಭೆಯ ಪ್ರಕಟಣೆ ತಿಳಿಸಿದೆ. ಇದಕ್ಕೆ ನಿರ್ದಿಷ್ಟ ದಿನಾಂಕವೆಂದಿಲ್ಲ,ಕೆಲಸ ನಡೆಯುತ್ತಿರುವ ಸಂದರ್ಭ ಯಾವ ಕ್ಷಣದಲ್ಲಾದರೂ ನೀರು ಬಂದ್ ಆಗಬಹುದು.
ಗೂಡಿನಬಳಿಯಲ್ಲಿ ರೇಚಕಸ್ಥಾವರದಿಂದ ಹೊಸದಾಗಿ ಅಳವಡಿಸಲಾದ ಪೈಪುಗಳನ್ನು ಜಲಸಂಗ್ರಹಗಾರಕ್ಕೆ ಲಿಂಕ್ ಮಾಡುವ ಸಂದರ್ಭದಲ್ಲಿಯೂ ಸಹ ಪರಿಸರದ ಜನತೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಂಭವವಿದ್ದು ನೀರು ಪೂರೈಕೆಯಲ್ಲಿ ಉಂಟಾಗುವ ವ್ಯತ್ಯಯಕ್ಕೆ ಜನರು ಸಹಕರಿಸುವಂತೆ ಪುರಸಭಾ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಹಾಗೂ ಕ.ನ.ನೀ.ಸ ಮತ್ತು ಒ.ಚ. ಮಂಡಳಿ ಮಂಗಳೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೀರು ಪೂರೈಕೆ ವ್ಯತ್ಯಯ ಸಾಧ್ಯತೆ"