Bantwalnews.com report
ವಿವಾಹಕ್ಕೆ ತೆರಳಿ ಮರಳುತ್ತಿದ್ದ ಇಬ್ಬರು ಯುವಕರಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ಕಲ್ಪನೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಬೈಕಿನಲ್ಲಿ ಬರುತ್ತಿದ್ದ ಜುನೈದ್(17) ಮತ್ತು ಸಿನಾನ್ (18) ಕಲ್ಪನೆ ತಲುಪುತ್ತಿದ್ದಂತೆ ಇನ್ನೊಂದು ಬೈಕಿನಲ್ಲಿ ಬಂದ ಮೂವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಜುನೈದ್ ಮುಲ್ಲೂರು ಬದ್ರಿಯಾನಗರ ನಿವಾಸಿಯಾದರೆ, ಸಿನಾನ್ ಶಾಂತಿಯಂಗಡಿ ನಿವಾಸಿ. ಇಬ್ಬರೂ ಕೈಕಂಬದಲ್ಲಿ ವಿವಾಹ ಸಮಾರಂಭ ಮುಗಿಸಿ ಮರಳುತ್ತಿದ್ದರು.
ಸ್ಥಳಕ್ಕೆ ಎಸ್ಪಿ ಭೂಷಣ್ ಬೊರಸೆ, ಕಮೀಷನರ್ ಚಂದ್ರಸೇಖರ್ , ಡಿವೈಎಸ್ ಪಿ ರವೀಶ್, ಬಂಟ್ವಾಳ ಪೊಲೀಸರು ಭೇಟಿ ನೀಡಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕಲ್ಪನೆಯಲ್ಲಿ ಯುವಕರಿಗೆ ಚೂರಿ ಇರಿತ"