www.bantwalnews.com ವರದಿ
ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಾ ದಿನಾಚರಣೆ, ದಾನಿಗಳ ನೆರವಿನಿಂದ ನಿರ್ಮಿಸಲಾದ ನೂತನ ಕೊಠಡಿಗಳ ಉದ್ಘಾಟನೆ ಶನಿವಾರ ನಡೆಯಿತು.
ಈ ಸಂದರ್ಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರ ಸಚಿವ ಬಿ.ರಮಾನಾಥ ರೈ, ವಿದ್ಯಾರ್ಥಿ ಪೋಷಕರು ಶಾಲಾ ವಾರ್ಷಿಕೋತ್ಸವದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಮೂಡಬಿದ್ರೆ ಜೈನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ವಿಶೇಷ ಶೈಕ್ಷಣಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ಚಂದ್ರಶೇಖರ್ ರಾವ್, ಮಂಗಳೂರಿನ ಉದ್ಯಮಿ ತಾರಾನಾಥ ಶೆಟ್ಟಿ ಬೋಳಾರ, ಬಂಟ್ವಾಳ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲಿಯಾನ್, ಪುರಸಭಾ ಸದಸ್ಯರಾದ ಮುಹಮ್ಮದ್ ಇಕ್ಬಾಲ್, ಜಗದೀಶ್ ಕುಂದರ್ ಭಾಗವಹಿಸಿದ್ದರು.
ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಪ್ರೇಮ್ ಪ್ರಕಾಶ್ ಡಿ’ಕ್ರೂಸ್, ಸದಸ್ಯರುಗಳಾದ ಉಮೇಶ್ ಬೋಳಂತೂರು, ಜಿ. ಮುಹಮ್ಮದ್, ಲೋಕೇಶ್ ಪೂಜಾರಿ, ಆನಂದ ಸಾಲ್ಯಾನ್, ಸತೀಶ್ ಕುಲಾಲ್, ವೆಂಕಟೇಶ್ ನಾಯಕ್, ಲತೀಫ್ ಖಾನ್ ಗೂಡಿನಬಳಿ, ಸುಧಾಕರ ಮಡಿವಾಳ, ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಇಂದಿರಾ ಚಂದಪ್ಪ, ಹಾಜಿ ಪಿ. ಮುಹಮ್ಮದ್ ರಫೀಕ್, ಡಿ.ಎಂ. ಕುಲಾಲ್, ರಮೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ನಿಟ್ಟೆ ವಿದ್ಯಾ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡ ನೂತನ ಕೊಠಡಿಯನ್ನು ಸಚಿವ ರಮಾನಾಥ ರೈ ಹಾಗೂ ಕರ್ನಾಟಕ ಬ್ಯಾಂಕ್ ವತಿಯಿಂದ ನಿರ್ಮಾಣಗೊಂಡ ಕೊಠಡಿಯನ್ನು ಬ್ಯಾಂಕ್ ಮಹಾಪ್ರಬಂಧಕ ಚಂದ್ರಶೇಖರ್ ರಾವ್ ಲೋಕಾರ್ಪಣೆಗೊಳಿಸಿದರು. ಕಟ್ಟಡ ನಿರ್ಮಾಣ ಗುತ್ತಿಗೆದಾರ ಓಸ್ವಾಲ್ಡ್ ಗೋವಿಯಸ್ ಅವರನ್ನು ಸಚಿವರು ಕಾಲೇಜು ಸಮಿತಿ ಪರವಾಗಿ ಸನ್ಮಾನಿಸಿದರು. ಇದೇ ಸಂದರ್ಭ ವಿವಿಧ ಸ್ಪರ್ಧಾ ವಿಜೇತ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವರು ಬಹುಮಾನ ವಿತರಿಸಿದರು. ಬಂಟ್ವಾಳ ಪುರಸಭಾ ವತಿಯಿಂದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಖಾಸಗಿ ವ್ಯಕ್ತಿಗಳಿಂದ ಕೊಡಮಾಡಲ್ಪಟ್ಟ ವಿದ್ಯಾರ್ಥಿ ವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ಇದೇ ವೇಳೆ ವಿತರಿಸಲಾಯಿತು.
ಕಾಲೇಜು ಪ್ರಾಂಶುಪಾಲೆ ಸರಸ್ವತಿ ಬಿ. ಸ್ವಾಗತಿಸಿ, ಉಪನ್ಯಾಸಕ ಯೂಸುಫ್ ವಂದಿಸಿದರು. ಉಪನ್ಯಾಸಕರಾದ ದಾಮೋದರ ವರದಿ ವಾಚಿಸಿ, ಬಾಲಕೃಷ್ಣ ನಾಯ್ಕ ವಿದ್ಯಾರ್ಥಿಗಳ ಬಹುಮಾನ ಪಟ್ಟಿ ವಾಚಿಸಿದರು. ಯಶೋಧಾ ಕೆ. ಹಾಗೂ ಅಬ್ದುಲ್ ರಝಾಕ್ ಅನಂತಾಡಿ ವಿವಿಧ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಾ ದಿನಾಚರಣೆ"