ಬಂಟ್ವಾಳ: ಸಾರ್ವಜನಿಕರ ದೂರಿನನ್ವಯ ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ನವೀನ್ ಮತ್ತು ತಂಡ ಸಿದ್ದಕಟ್ಟೆ ಪಡಿತರ ಸೊಸೈಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಲಿ. ಪಡಿತರ ಸೊಸೈಟಿಯಲ್ಲಿ ಸಾಮಗ್ರಿಗಳು ಸರಿಯಾಗಿ ಸಿಗುತ್ತಿಲ್ಲ, ನಾಮಫಲಕವೂ ಇಲ್ಲ ಎಂಬ ದೂರು ಗ್ರಾಮಸಭೆಯಲ್ಲಿ ಕೇಳಿಬಂದಿತ್ತು.
ಜಾಹೀರಾತು
ಈ ಹಿನ್ನೆಲೆಯಲ್ಲಿ ನ್ಯಾಯಬೆಲೆಯಲ್ಲಿ ದಾಸ್ತಾನು ಇರಿಸಲಾದ ಪಡಿತರ ಸಾಮಗ್ರಿಗಳನ್ನು ಪರಿಶೀಲಿಸಿದ ಅವರು, ಪಡಿತರ ಗ್ರಾಹಕರ ಹಿತಾಸಕ್ತಿ ಅನುಸರಿಸಿ ಅಗತ್ಯ ಪ್ರಕಟಣೆಯನ್ನುಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಆದೇಶಿಸಿದರು.
ಅಂಗಡಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಅವರು ಎಚ್ಚರಿಸಿದ್ದು ಇಂಥ ದೂರುಗಳು ಬಂದರೆ ಶಿಸ್ತುಕ್ರಮದ ಶಿಫಾರಸು ಮಾಡುವುದಾಗಿ ತಿಳಿಸಿದರು. ಈ ಸಂದರ್ಭ ಗ್ರಾಮ ಕರಣಿಕ ಜನಾರ್ಧನ, ಪ್ರವೀಣ್ ಕುಮಾರ್, ಸಿಬ್ಬಂದಿಗಳಾದ ವೆಂಕಟರಮಣ, ಸತೀಶ್ ಜೊತೆಗಿದ್ದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಪಡಿತರ ವಿತರಣಾ ವ್ಯವಸ್ಥೆ ಪರಿಶೀಲನೆ, ಸರಿಪಡಿಸಲು ಸೂಚನೆ"
Be the first to comment on "ಪಡಿತರ ವಿತರಣಾ ವ್ಯವಸ್ಥೆ ಪರಿಶೀಲನೆ, ಸರಿಪಡಿಸಲು ಸೂಚನೆ"