ಬಂಟ್ವಾಳ: ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಬಿಲ್ಲವ ಸಮಾಜದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ , ವೃತ್ತಿ ಮಾರ್ಗದರ್ಶನ ,ನಾಯಕತ್ವ ,ಪುನರ್ಮನನ ತರಬೇತಿ ನೀಡುವ ಸಲುವಾಗಿ ಅನ್ವೇಷಣಾ-2016 ಎಂಬ ಏಕದಿನ ಕಾರ್ಯಗಾರವನ್ನು 2016ನೇ ಡಿಸಂಬರ್ 25ರಂದು ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಬಿ.ಸಿ.ರೋಡ್ ಇಲ್ಲಿ ನಡೆಸಲಿದೆ.
ಕಾರ್ಯಾಗಾರದಲ್ಲಿ ಭಾಗವಹಿಸುವ ವಿಧ್ಯಾರ್ಥಿಗಳಿಗೆ ಉಚಿತ ಊಟೋಪಚಾರ ವ್ಯವಸ್ಥೆ ,ಕಾರ್ಯಗಾರಕ್ಕೆ ಬೇಕಾಗುವ ಇತರ ಪರಿಕರಗಳನ್ನು ಒದಗಿಸಲಾಗುವುದು . ಭಾಗವಹಿಸಿವರೆಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು
ಕಾರ್ಯಸೂಚಿ ಹೀಗಿದೆ. ಬೆಳಗ್ಗೆ 9ರಿಂದ 9.30 ನೋಂದಣಿ,9.30-10ವರೆಗೆ ಚಹಾ ವಿರಾಮ, 10ರಿಂದ 10.30ವರೆಗೆ ಉದ್ಘಾಟನಾ ಕಾರ್ಯಕ್ರಮ, 10.30ರಿಂದ 11.30ವರೆಗೆ ಮೊದಲನೇ ಗೋಷ್ಠಿ, ವೃತ್ತಿ ಮಾರ್ಗದರ್ಶನ, 11.30ರಿಂದ 12.30ವರೆಗೆ ಎರಡನೇ ಗೋಷ್ಠಿ ಪರಿಣಾಮಕಾರಿ ಸಂಹವನ ಕೌಶಲ, ಬಳಿಕ ಊಟದ ವಿರಾಮ.1.15ರಿಂದ – 02.15ವರೆಗೆ ಗೋಷ್ಟಿ ವಿಧ್ಯಾರ್ಥಿಗಳು ಮತ್ತು ಸಂಘಟನೆ 02.15ರಿಂದ – 03.15ವರೆಗೆ ಸಂವಾದ 03.15ರಿಂದ – 03.45ವರೆಗೆ ಸಮಾರೋಪ ಸಮಾರಂಭ ನಡೆಯಲಿದೆ.ಮಾಹಿತಿಗಾಗಿ ಚೇತನ್ ಎಂ, 7338505228, ಸಂಚಾಲಕರು, ಅನ್ವೇಷಣಾ -2016 ಯುವವಾಹಿನಿ(ರಿ.), ಬಂಟ್ವಾಳ ತಾಲೂಕು ಘಟಕ ಸಂಪರ್ಕಿಸಬಹುದು.
Be the first to comment on "ಯುವವಾಹಿನಿ ಬಂಟ್ವಾಳದಿಂದ ಅನ್ವೇಷಣಾ – 2016"