ಬಂಟ್ವಾಳ ತಾಲೂಕಿನಾದ್ಯಂತ ಪ್ರವಾದಿ ಜನ್ಮದಿನಾಚರಣೆ, ಮಿಲಾದ್ ರ್‍ಯಾಲಿ ನಡೆದವು.
ಪ್ರವಾದಿ ಜನ್ಮ ದಿನಾಚರಣೆಯ ಅಂಗವಾಗಿ ಸೋಮವಾರ ಕೇಂದ್ರ ಜುಮಾ ಮಸೀದಿ ಮಿತ್ತಬೈಲ್‌ನಲ್ಲಿ ಬೃಹತ್ ಮೀಲಾದ್ ರ್‍ಯಾಲಿ ನಡೆಯಿತು. ರ್‍ಯಾಲಿಯನ್ನು ಅಲ್ ಹಾಜ್ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್ ಉಸ್ತಾದ್ ಉದ್ಘಾಟಿಸಿದರು.
ಮಸೀದಿಯ ಖತೀಬರಾದ ಖಲಿಲುರಹ್ಮಾನ್ ದಾರಿಮಿ, ಮುದರಿಸ್ ಅಬ್ದುಲ್ ಹಮೀದ್ ದಾರಿಮಿ, ಅಧ್ಯಕ್ಷ ಹಬೀಬುಲ್ಲಾ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅದ್ದೇಡಿ, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಷಾದ್ ಹುಸೈನ್ ದಾರಿಮಿ, ಕೇಂದ್ರ ಮದರಸದ ಸದರ್ ಅಬ್ದುಲ್ ಹಮೀದ್ ದಾರಿಮಿ ಸಹಿತ ಮೊದಲಾದವರು ಉಪಸ್ಥಿತರಿದ್ದರು.
ಪ್ರವಾದಿ ಜನ್ಮ ದಿನವನ್ನು ಸೋಮವಾರ ಫರಂಗಿಪೇಟೆ ಸಮೀಪದ ಕುಂಜತ್ಕಲ ನೂರುಲ್ ಹುದಾ ಮದರಸ ಹಾಗೂ ಮಸೀದಿಯಿಂದ ಆಚರಿಸಲಾಯಿತು. ಮದರಸದ ಸದರ್ ಉಸ್ತಾದ್ ದುಅ ನೆರವೇರಿಸಿದರು. ಅಧ್ಯಕ್ಷರು ಧ್ವಜಾರೋಹಣಗೈದರು. ವಿದ್ಯಾರ್ಥಿಗಳಿಂದ ಆಕರ್ಷಕ ರ್‍ಯಾಲಿ ನಡೆಯಿತು.
ಮುಹಿಯುದ್ದೀನ್ ಜುಮಾ ಮಸೀದಿ ಕುಕ್ಕಾಜೆಯ ವತಿಯಿಂದ ಪ್ರವಾದಿ ಜನ್ಮ ದಿನಾಚರಣೆ ನಡೆಯಿತು.
ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ ಇದರ ವತಿಯಿಂದ ಸೋಮವಾರ ಪ್ರವಾದಿ ಜನ್ಮ ದಿನಾಚರಣೆ ನಡೆಯಿತು. ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ದುಅ ನೆರವೇರಿಸಿದರು. ಅಧ್ಯಕ್ಷ ಅಬೂಬಕ್ಕರ್ ಹಾಜಿ, ಪ್ರಧಾನ ಕಾರ್ಯದರ್ಶಿ ಟಿ.ಎಸ್.ಅಬ್ದುಲ್ ಲತೀಫ್, ಮಾಜಿ ಅಧ್ಯಕ್ಷ ಟಿ.ಎಂ.ಮೂಸಬ್ಬ, ಪದಾಧಿಕಾರಿಗಳಾದ ಇಸಾಕ್, ರಶೀದ್, ಇಮ್ತಿಯಾಝ್, ಮುಹಿಯುದ್ದೀನ್, ಗ್ರಾಮ ಪಂಚಾಯತ್ ಸದಸ್ಯ ಝಹೂರು ಅಹ್ಮದ್ ಸಹಿತ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ತಾಲೂಕಿನಾದ್ಯಂತ ಪ್ರವಾದಿ ಜನ್ಮದಿನಾಚರಣೆ"