ಬಂಟ್ವಾಳ: 49ನೇ ವಾರದ ಸ್ವಚ್ಛ ಭಾರತ ನಿರ್ಮಲ ಬಂಟ್ವಾಳ ಕಾರ್ಯಕ್ರಮದಡಿ ಸ್ವಚ್ಛತೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವು ಗುರುವಾರ ಗುರುವಾರ ಬೆಳಿಗ್ಗೆ 7.30 ಗೆ ಬಿ ಕಸಬಾ ಗ್ರಾಮದ ಕೆಳಗಿನ ಪೇಟೆಯಲ್ಲಿ ನಡೆಯಿತು.
ರಸ್ತೆ ಬದಿ ಶುಚಿತ್ವ ಮಾಡಿದ ಬಳಿಕ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಭಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಉದ್ದೇಶಿಸಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಮೊಹಮ್ಮದ್ ನೀಮ, ಮುಖ್ಯಾಧಿಕಾರಿ ಸುಧಾಕರ್ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಪುರಸಭಾ ಸದಸ್ಯರಾದ ಮುನೀಷ್ ಆಲಿ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಜುಮ್ಮಾ ಮಸೀದಿ ಅಧ್ಯಕ್ಷರಾದ ಇಸ್ಮಾಯಿಲ್ ಅರಬಿ, ಆರೋಗ್ಯಾಧಿಕಾರಿ ರತ್ನಪ್ರಸಾದ್, ಪುರಸಭಾ ಅಧಿಕಾರಿಗಳಾದ ಮತ್ತಾಡಿ, ಅಬ್ದುಲ್ ರಝ್ಝಾಕ್ ಹಾಗು ಸ್ಥಳೀಯ ಗಣ್ಯರುಗಳಾದ ಅಬ್ದುಲ್ಲತೀಫ್ ನೀಮ, ಅಬ್ದುಲ್ಲತೀಫ್ ಚೆಮ್ಮೋನು ಉಪಸ್ಥಿತರಿದ್ದರು.
ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಉಪಾಧ್ಯಯಿನಿ ಮೆಟಿಂಡ ಡಿ’ಸೋಜ ಒಣ ಹಾಗು ಹಸಿ ಕಸದ ಬಕೆಟ್ ಗೆ ಚಾಲನೆ ನೀಡಿದರು. ಸುಮಾರು 172 ಮನೆಗಳಿಗೆ ಬಕೆಟ್ ವಿತರಿಸಲಾಯಿತು.
Be the first to comment on "ಸ್ವಚ್ಛತೆ, ಅರಿವು ಮೂಡಿಸುವ ಕಾರ್ಯಕ್ರಮ"