ವಿಟ್ಲ: ವಿಟ್ಲ ನಗರದಲ್ಲಿ ಎರಡು ಪಕ್ಷಗಳಿಂದ ವಿಭಿನ್ನ ರೀತಿಯಲ್ಲಿ ನೋಟು ನಿಷೇಧ ಕುರಿತ ಪ್ರತಿಭಟನೆ, ಸಂಭ್ರಮ ದಿನ ನಡೆಯಿತು.
ಬಿಜೆಪಿ ವಿಟ್ಲ ನಗರ ಸಮಿತಿ ವತಿಯಿಂದ ಬ್ಯಾಂಕ್ಗಳಿಗೆ ತೆರಳಿ ಸಿಬ್ಬಂದಿಗಳಿಗೆ ಪುಷ್ಪ ನೀಡಿ ಸಿಹಿ ಹಂಚುವ ಮೂಲ ಸಂಭ್ರಮ ದಿನ ಆಚರಿಸಲಾಯಿತು.
ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ ಎಂ ವಿಟ್ಲ, ಸ್ಥಾಯೀ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಎಸ್. ಶಿವಾಜಿನಗರ, ವಿ.ರಾಮದಾಸ ಶೆಣೈ, ಶ್ರೀಕೃಷ್ಣ ವಿಟ್ಲ, ಜಯಂತ್, ಮಂಜುನಾಥ ಕಲ್ಲಕಟ್ಟ, ಇಂದಿರಾ, ಉಷಾ, ಸಂದ್ಯಾ ಮೋಹನ್, ಗೀತಾ ಪುರಂದರ್, ಚಂದ್ರಕಾಂತಿ, ಉದ್ಯಮಿ ಹರೀಶ್ ನಾಯಕ್ ಮತ್ತಿತರರು ಹಾಜರಿದ್ದರು.
ಕಾಂಗ್ರೆಸ್ ಪಕ್ಷದ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ ಎಸ್ ಮಹಮ್ಮದ್, ತಾಲೂಕು ಪಂಚಾಯಿತಿ ಅಬ್ಬಾಸ್ ಆಲಿ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ಚಂದ್ರ ಆಳ್ವ, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಕೇಪು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಕರೀಂ ಕುದ್ದುಪದವು, ಉಮಾನಾಥ ರೈ, ಮುಳೀಧರ ಶೆಟ್ಟಿ, ರಮಾನಾಥ ವಿಟ್ಲ, ಶಮೀರ್ ಪಳಿಕೆ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ನೋಟು ನಿಷೇಧ ಕುರಿತ ಪ್ರತಿಭಟನೆ, ಸಂಭ್ರಮ ದಿನ"