ಬಂಟ್ವಾಳ: ಹಸು ದೇಶದ ಕೃಷಿ ಸಂಸ್ಕೃತಿಯನ್ನು ಉಳಿಸುತ್ತದೆ ಮತ್ತು ಜನರ ಆರೋಗ್ಯ ವೃದ್ದಿಸುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಹೇಳಿದರು.
ಕಲ್ಲಡ್ಕ ಹಾಲುಉತ್ಪಾದಕರ ಸಹಕಾರ ಸಂಘ ನಿ. ನೂತನ ಸಾಂದ್ರ ಶೀತಲೀಕರಣ ಘಟಕ (ಬಿ.ಎಂ.ಸಿ.) ಕ್ಷೀರವಾರಿಧಿ ಉದ್ಘಾಟಿಸಿ ಮಾತನಾಡಿದರು.
ಜನರ ಬದುಕಿಗೆ ಬೇಕಾದ ಕಾರ್‍ಯವನ್ನು ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ಮಾಡಿದೆ. ಗೋವಿನ ಬಗ್ಗೆ ಎಲ್ಲಾ ಜನರಿಗೆ ಪ್ರೀತಿ ಬರಬೇಕು. ಗೋವಿನ ರಕ್ಷಣೆ ಆದರೆ ಮಾತ್ರ ಹಾಲು ಉತ್ಪಾದಕರ ಸಹಕಾರ ಸಂಘ ಬೆಳೆಯುತ್ತದೆ ಎಂದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಮಾತನಾಡಿ ಹಾಲು ಉತ್ಪಾದನೆಯ ಮೂಲಕ ಈ ಮಣ್ಣಿನ ಶ್ರೇಷ್ಟತೆಯನ್ನು ಉಳಿಸುವ ಕೆಲಸ ಹೆಚ್ಚಾಗುತ್ತಿದೆ. ಗುಣಮಟ್ಟದ ಹಾಲಿನ ಉತ್ಪಾದನೆಯ ಮೂಲಕ ಹಳ್ಳಿಗಳು ಆರ್ಥಿಕವಾಗಿ ಎತ್ತರಕ್ಕೆ ಬೆಳೆಯಲು ಮಹತ್ತರ ಪಾತ್ರವಹಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಮಾತನಾಡಿ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲ್ಲಡ್ಕದಲ್ಲಿ ಶೀತಲೀಕರಣ ವ್ಯವಸ್ಥೆ ಸುಸಜ್ಜಿತವಾಗಿ ಮಾಡಲಾಗಿದೆ ಎಂದು ಹೇಳಿದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ನಿರ್ದೇಶಕರುಗಳಾದ ಕೆ.ಪಿ. ಸುಚರಿತ ಶೆಟ್ಟಿ, ವೀಣಾ ಆರ್.ರೈ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ, ಗೋಳ್ತಮಜಲು ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಉಪಾಧ್ಯಕ್ಷ ರತ್ನಾಕರ ಪ್ರಭು, ಕಾರ್‍ಯದರ್ಶಿ ರಾಜೇಶ್, ವ್ಯವಸ್ಥಾಪಕ ಡಾ. ವಿತ್ಯಾನಂದ ಭಕ್ತ, ಉಪವ್ಯವಸ್ಥಾಪಕ ಡಾ. ಮಧುಸೂಧನ ಕಾಮತ್, ನಿರ್ದೇಶಕರುಗಳಾದ ರತ್ನಾಕರ ಭಂಡಾರಿ ಸಂಕಪ್ಪ ಕೊಟ್ಟಾರಿ, ಲಿಯೋ ಡಿ’ಕುನಾ, ಹರೀಶ ನಾಯ್ಕ್, ಧನವತಿ, ಮಿಥುನ್ ಉಪಸ್ಥಿತರಿದ್ದರು.
ಕಲ್ಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿ ಪ್ರಸ್ತಾವನೆ ನೀಡಿದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಜಗದೀಶ ಎ ವಂದಿಸಿದರು. ಕಾರ್‍ಯದರ್ಶಿ ರಾಜೇಶ್ ಕಾರ್‍ಯಕ್ರಮ ನಿರೂಪಿಸಿದರು.
Be the first to comment on "ಹಸುವಿನಿಂದ ದೇಶದ ಕೃಷಿ ಸಂಸ್ಕೃತಿ ವೃದ್ಧಿ"