ಬಂಟ್ವಾಳ: ವಿವಿಧ ಯೋಜನೆಗಳಡಿ ಪುರಸಭೆ ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಪುರಸಭೆಯಲ್ಲಿ ನಡೆಯಿತು.
ರಾಜೀವ ವಸತಿ ಯೋಜನೆಯಡಿ 62 ಫಲಾನುಭವಿಗಳಿಗೆ ಆದೇಶಪತ್ರ, ಅಂಬೇಡ್ಕರ್ ವಸತಿ ಯೋಜನೆಯ 52 ಮಂದಿಗೆ ಆದೇಶಪತ್ರ, ಶೇ.3ರ ಯೋಜನೆ ವಿಕಲಚೇತನ 75ಕ್ಕಿಂತ ಹೆಚ್ಚು ಇರುವ 48 ಮಂದಿಗೆ ಪೋಷಣಾ ಭತ್ಯೆ, 137 ಮಂದಿಗೆ ವಿದ್ಯಾರ್ಥಿ ವೇತನವನ್ನು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ವಿತರಿಸಿದರು.
ಐಎಎಸ್ ಅಧಿಕಾರಿ ಗಾರ್ಗಿ ಜೈನ್, ಮುಖ್ಯಾಧಿಕಾರಿ ಕೆ.ಸುಧಾಕರ್, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಆರೋಗ್ಯಾಧಿಕಾರಿ ಪ್ರಸಾದ್ ಮತ್ತು ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ"