ಬಂಟ್ವಾಳ: ಮಕ್ಕಳನ್ನು ಈ ದೇಶದ ಇಂದಿನ ಪೌರರೆಂದು ನಾಗರಿಕರು ಪುರಸ್ಕರಿಸಬೇಕು ಎಂದು ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಅವರು ಹೇಳಿದರು.
ಇರಾ ತಾಳಿಪಡ್ಪು ಬಾಲ ವಿಕಾಸ ಸಮಿತಿ ಆಶ್ರಯದಲ್ಲಿ ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ನಡೆದ
ಮಕ್ಕಳ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳೊಂದಿಗೆ ಬೆರೆತು ಅವರ ಭಾವನೆಯನ್ನು ಸ್ಪಂದಿಸುವ ಪ್ರಯತ್ನ ಅಂಗನವಾಡಿ ಕೇಂದ್ರ ದಲ್ಲಿ ನಡೆಯಲಿ ಎಂದು ಶುಭ ಹಾರೈಸಿದರು.
ಅಂಗನವಾಡಿ ಕೇಂದ್ರ ನಿವೇಶನದ ಪಹಣಿ ಪತ್ರ ಹಾಗೂ ಭೂ ದಾಖಲೆ ತಯಾರಿಸಲು ಶ್ರಮಿಸಿದ ಗ್ರಾಮ ಲೆಕ್ಕಾಧಿಕಾರಿ ಎ.ಪಿ.ಭಟ್ ಅವರನ್ನು ಸನ್ಮಾನಿಸಲಾಯಿತು.
ಕೇಂದ್ರಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಮುತುವರ್ಜಿ ವಹಿಸಿದ ಮೊಯಿದಿನ್ ಕುಂಞ ಅವರನ್ನು ಸನ್ಮಾನಿಸಲಾಯಿತು.
ಗ್ರಾ.ಪಂ.ಸದಸ್ಯರಾದ ಎಂ.ಬಿ.ಉಮ್ಮರ್, ಗೋಪಾಲ ಅಶ್ವಥ್ಥಡಿ, ಪಾರ್ವತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಎಸ್, ಕೇಂದ್ರದ ಮೇಲ್ವಿಚಾರಕಿ ಗುಣಾವತಿ, ಗ್ರಾ.ಪಂ.ಮಾಜಿ ಸದಸ್ಯರಾದ ಇಬ್ರಾಹಿಂ ಮೂಲೆ, ಸಾಮಾಜಿಕ ಕಾರ್ಯಕರ್ತರಾದ ಮೊ ಯಿದೀನ್ ಕುಂಞ, ಯೂಸುಫ್ ಮೂಲೆ,ಉಪಸ್ಥಿತರಿದ್ದರು. ಹೈದರ್ ಅಶ್ರಫಿ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ರೇಖಾ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
Be the first to comment on "ಮಕ್ಕಳನ್ನು ಪೌರರಂತೆ ಕಾಣಿ: ಅಬ್ದುಲ್ ರಝಾಕ್"