ಪುತ್ತೂರು: ಪತ್ರಕರ್ತರು ಸಾಮಾಜಿಕ ಬಳಕೆದಾರರು. ಅವರು ಸಾಮಾಜಿಕ ಜಾಲತಾಣಗಳಲ್ಲೂ ಪರಿಣಿತನಾಗಿರಬೇಕಾಗುತ್ತದೆ ಎಂದು ಅಂಕಣಕಾರ, ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಹೇಳಿದರು.
ಭಾನುವಾರ ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಫಾರ್ಮರ್ ಫಸ್ಟ್ ಟ್ರಸ್ಟ್ ಹಾಗೂ ಅಡಿಕೆ ಪತ್ರಿಕೆ ವತಿಯಿಂದ ನಡೆದ ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಫಾರ್ಮರ್ ಫಸ್ಟ್ ಟ್ರಸ್ಟ್ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ, ಸಾಮಾಜಿಕ ತಾಲತಾಣಗಳ ,ತಂತ್ರಜ್ಞಾನಗಳ ಬಳಕೆ ಸೂಕ್ತ. ಆದರೆ ತಂತ್ರಜ್ಞಾನವನ್ನು ಹದ್ದುಬಸ್ತಿನಲ್ಲಿಡುವ ಬುದ್ದಿವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಫಾರ್ಮರ್ ಫಸ್ಟ್ ಟ್ರಸ್ಟ್ ಕಾರ್ಯದರ್ಶಿ ಶಂಕರ್ ಸಾರಡ್ಕ, ಅಡಿಕೆ ಪತ್ರಿಕೆ ಕಾರ್ಯನಿರ್ವಾಕ ಸಂಪಾದಕ ಶ್ರೀಪಡ್ರೆ, ಕೃಷಿಮಾಧ್ಯಮ ಕೇಂದ್ರದ ಶಿವರಾಂ ಪೈಲೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಮಾರ್ಟ್‌ಫೋನು ಬಳಕೆ ಹಾಗೂ ಜಾಲತಾಣ, ಕಿರುತಂತ್ರಾಂಶಗಳ ಬಗ್ಗೆ ಡಾ.ಮೋಹನ್ ತಲಕಾಲುಕೊಪ್ಪ ,ಸುಳಿವು ಹಾಗೂ ಲೇಖನ ತಯಾರಿ ಬಗ್ಗೆ ನಾ.ಕಾರಂತ ಪೆರಾಜೆ, ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಮಿತಿಗಳು ಮತ್ತು ಜವಾಬ್ದಾರಿ ಬಗ್ಗೆ ಶ್ರೀಪಡ್ರೆ, ಮಾಧ್ಯಮಸ್ನೇಹಿ ಛಾಯಾಗ್ರಹಣದ ಬಗ್ಗೆ ಮಹೇಶ್ ಪುಚ್ಚಪ್ಪಾಡಿ ಮಾಹಿತಿ ನೀಡಿದರು. ರಾಜ್ಯದ ವಿವಿಧೆಡೆಗಳಿಂದ ಶಿಬಿರಾರ್ಥಿಗಳು ಆಗಮಿಸಿದ್ದರು.
ಗೇರು ಸಂಶೋಧನಾ ಕೇಂದ್ರದ ತಾಂತ್ರಿಕ ಅಧಿಕಾರಿ ಪ್ರಕಾಶ್ ಭಟ್ ಕರ್ಕಿ ಸ್ವಾಗತಿಸಿ ವಂದಿಸಿದರು.
Be the first to comment on "ವಾಟ್ಸಪ್ ಕೃಷಿ ಪತ್ರಿಕೋದ್ಯಮ ಶಿಬಿರ"