ವಿಟ್ಲ: ಕೆಲವರಿಗೆ ಧನ ಸಂಪಾದನೆ ಚಿಂತೆ, ಇನ್ನು ಕೆಲವರಿಗೆ ಹಣ ಎಲ್ಲಿಡುವುದು ಎಂಬುದೇ ಚಿಂತೆ. ಹೀಗೆ ಪ್ರತಿದಿನ ಬ್ಯಾಂಕು, ಬ್ಯಾಂಕುಗಳಿಗೆ ಲಕ್ಷಗಟ್ಟಲೆ ಹಣ ಡೆಪಾಸಿಟ್ ಮಾಡ್ತೀರಾ ಎಂದು ಅಂಡಲೆಯುವ ಮಂದಿಯೂ ಕಾಣಲು ಸಿಗಬಹುದು. ಇಂಥ ಸನ್ನಿವೇಶದಲ್ಲಿ ನೋಟುಗಳನ್ನು ಎಲ್ಲೆಂದಲ್ಲಿ ಎಸೆಯುವ ಮಂದಿಯೂ ಇದ್ದಾರಾ?
ಹೌದು ಎನ್ನುವಂತೆ ಈ ಚಿತ್ರಣ ತೋರಿಸುತ್ತದೆ. ವಿಟ್ಲ-ಕಬಕ ರಸ್ತೆಯ ಕಂಬಳಬೆಟ್ಟು ಸೇತುವೆ ಸಮೀಪ ನೋಟುಗಳನ್ನು ಮಾರ್ಗದಲ್ಲೇ ಎಸೆದಿದ್ದುದು ಕಂಡುಬಂತು.
ಕಬಕ ವಿಟ್ಲ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸೊಂದರಿಂದ 500 – 1000 ನೋಟಿನ ಮಳೆಗೈಯ್ಯಲಾಗಿದೆ. ಬಸ್ಸಿನ ಚಾಲಕನ ಕಡೆಯ ಕಿಟಕಿಯಿಂದ ನೋಟುಗಳು ಎಸೆಯಲ್ಪಟ್ಟಿದ್ದು, ಸುಮಾರು ನೂರು ಮೀಟರ್ ದೂರದವರೆಗೆ ಹಳೆಯ ನೋಟುಗಳು ಬಿದ್ದಿದ್ದವು.
ನೋಟು ಎಸೆದಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಹೆಕ್ಕಿಕೊಳ್ಳಲು ಮುಗಿಬಿದ್ದಿದ್ದಾರೆ. ಒಬ್ಬೊಬ್ಬರಿಗೆ 4 ,5 ಸಾವಿರದಂತೆ ನೋಟುಗಳು ಸಿಕ್ಕಿದ್ದು, ಸುಮಾರು 50 ಸಾವಿರಕ್ಕಿಂತ ಹೆಚ್ಚು ಎಸೆದಿರುವ ಸಾಧ್ಯತೆ ಇದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಹಣ ಸಿಕ್ಕ ಮಂದಿ ಸ್ಥಳದಿಂದ ಅಲ್ಲಿಂದ ತೆರಳಿದ್ದಾರೆ.
Be the first to comment on "ರಸ್ತೆಯಲ್ಲೇ ಕಾಣಸಿಕ್ಕಿದ 500, 1000 ನೋಟು"