ಬಂಟ್ವಾಳ: ಮುಂದಿನ ದಿನಗಳಲ್ಲಿ ಸಹಕಾರಿ ಸಂಘದಲ್ಲಿ ಶೇ.6 ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿದರು.
ಬಂಟ್ವಾಳ ತಾಲೂಕು ಬಡಗಕಜೆಕಾರು ಪಾಂಡವರಕಲ್ಲು ಕಜೆಕಾರು ಸಹಕಾರಿ ವ್ಯವಸಾಯಿಕ ಸಂಘಕ್ಕೆ ಸುಮಾರು 28 ಲ.ರೂ ವೆಚ್ಚದಲ್ಲಿ ನವೀಕೃತಗೊಂಡ ಕಛೇರಿಯನ್ನು ಮತ್ತು 63ನೇ ಅಖಿಲಭಾರತ ಸಹಕಾರ ಸಪ್ತಾಹ-2016ರ ಸಮಾರೋಪವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನಮಂತ್ರಿ ಮೋದಿ ಅವರ ಯೋಜನೆಯಂತೆ ಕಾಳಧನದ ಹುಟ್ಟಡಗಿಸುವ 500 ಮತ್ತು 1000 ರೂ.ನೋಟುಗಳ ಮಾನ್ಯತೆ ರದ್ದಿನಿಂದ ಕೃಷಿಕರಿಗೆ ಯಾವುದೇ ಭಯ ಬೇಡ. ಸಹಕಾರಿ ಸಂಘಗಳು ಶೀಘ್ರದಲ್ಲಿ ಯಥಾರೀತಿ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿದರು.
ದ.ಕ.ಕೇ.ಸ.ಬ್ಯಾಂಕ್ ನಿರ್ದೇಶಕ ಟಿ.ಬಿ.ರಾಜಾರಾಮ ಭಟ್ ಅವರು ಗೋದಾಮು ಕಟ್ಟಡವನ್ನು ಉದ್ಘಾಟಿಸಿದರು.ದ.ಕ.ಜಿ.ಸ.ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳು,ಅರ್ಬನ್ ಬ್ಯಾಂಕ್‌ಗಳು,ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಏಕ ರೀತಿಯ ನೆಟ್‌ವರ್ಕ್ ಹೊಂದುವಂತೆ ತಾಂತ್ರಿಕತೆಯನ್ನು ಹೊಂದಿ ವೃತ್ತಿಪರ ಮೌಲ್ಯವರ್ಧಿತ ಸೇವೆಯನ್ನು ನೀಡುವಂತಾದಾಗ ಮುಂದಿನ ಸವಾಲುಗಳನ್ನು ಎದುರಿಸಲು ಸಾಧ್ಯವಾಗುವುದುಎಂದು ಹೇಳಿದರು.
ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ,ಬಡಗಕಜೆಕಾರು ಗ್ರಾ.ಪಂ.ಅಧ್ಯಕ್ಷ ಬಿ.ವಜ್ರ ಪೂಜಾರಿ, ಬಂಟ್ವಾಳ ಸಹಕಾರಿ ಯೂನಿಯನ್ ಅಧ್ಯಕ್ಷ ಜಿ.ಆನಂದ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿ,ಕಜೆಕಾರು ಸ.ವ್ಯ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರಸ್ವತಿ,ಉಪಾಧ್ಯಕ್ಷ ಕೆ.ಜಯ ಬಂಗೇರ, ನಿರ್ದೇಶಕರಾದ ಕೆ.ಡೀಕಯ ಬಂಗೇರ,ದಿನೇಶ ಜೆಂಕ್ಯಾರು,ವಿಶ್ವನಾಥ ನಾಯ್ಕ,ಉಮರಬ್ಬ,ಸೀತಮ್ಮ ,ರೋಹಿನಾಥ ಕೆ. ಮತ್ತು ಜಯ ಕೆ.,ಡಿ.ಸಿ.ಸಿ.ಬ್ಯಾಂಕಿನ ಪ್ರತಿನಿಧಿ ಕೇಶವ ಕಿಣಿ ಮತ್ತು ಸಿಬಂದಿ ವರ್ಗ, ಜಿಲ್ಲಾ ಸಹಕಾರಿ ಯೂನಿಯನ್ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಹೊನ್ನಪ್ಪ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಲಾಯಿತು ಹಾಗೂ ಗುತ್ತಿಗೆಗಾರ ಪ್ರಶಾಂತ್ ಆಚಾರ್ಯ ಮತ್ತು ನಿವೃತ್ತ ಸೈನಿಕ ಸತೀಶ್ ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು.ಸಿಬಂದಿ ಪ್ರೇಮನಾಥ್ ಸಮ್ಮಾನ ಪತ್ರ ವಾಚಿಸಿದರು.
ಕಜೆಕಾರು ಸ.ವ್ಯ.ಸಂಘದ ಅಧ್ಯಕ್ಷ ಕೆ.ಹರೀಶ್ಚಂದ್ರ ಪೂಜಾರಿ ಅವರು ಸ್ವಾಗತಿಸಿ,ಪ್ರಸ್ತಾವಿಸಿದರು.ನಿರ್ದೇಶಕ ಕೆ.ಡೀಕಯ ಬಂಗೇರ ವಂದಿಸಿದರು.ಪತ್ರಕರ್ತ ಗೋಪಾಲ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಸಹಕಾರಿ ಸಂಘದಲ್ಲಿ ಶೇ.6 ಕಡಿಮೆ ಬಡ್ಡಿ ದರದಲ್ಲಿ ಸಾಲ"