ಬಂಟ್ವಾಳ: ಭಾಷೆಯು ಮಾನವನ ಸಂವಹನಕ್ಕೆ ಅಗತ್ಯವಾಗಿದೆ. ವರ್ತಮಾನದ ಜಾಗತಿಕ ಪರಿಸರದಲ್ಲಿ ಆಂಗ್ಲ ಭಾಷೆಯ ಕಲಿಕೆಯ ಅನಿವಾರ್ಯತೆ ಇದೆ ಎಂದು ಮುಡಿಪು ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೋ. ನಂದಕಿಶೋರ್ ಹೇಳಿದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಸಂಘದ ಸಹಯೋಗದಲ್ಲಿ ’ಆಂಗ್ಲ ಭಾಷೆ ಕಲಿಕೆ ಮತ್ತು ಬಳಕೆ’ ಎಂಬ ವಿಷಯ ಬಗ್ಗೆ ಉಪನ್ಯಾಸ ನೀಡಿದರು.
ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ಭಾಷಾ ಸಂಘದ ಸಂಯೋಜಕಿ ಉಪನ್ಯಾಸಕಿ ರಂಜಿತಾ ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂಗ್ಲ ಭಾಷಾ ಸಂಘದ ಸದಸ್ಯರಾದ ಪ್ರಜ್ಙಾ ಪಿ. ನಾಯಕ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಿಂಚನ ಹಾಗೂ ಸುರಕ್ಷಾ ಪ್ರಾರ್ಥಿಸಿದರು. ಕ್ರಿಸ್ವಿನ್ ಪ್ರೇಮ್ ವಾಸ್ ವಂದಿಸಿದರು. ವಿದ್ಯಾರ್ಥಿನಿ ರಾಯಲ್ ವಿನಿಶಾ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಆಂಗ್ಲ ಭಾಷಾ ಕಲಿಕೆ ಅನಿವಾರ್ಯ"