ಬಂಟ್ವಾಳ: ದಾರುರ್ರಶಾದ್ ಎಜುಕೇಶನಲ್ ಟ್ರಸ್ಟ್ ಇದರ ಮಹಾಸಭೆಯು ಪಾಣೆಮಂಗಳೂರು ಕಚೇರಿಯಲ್ಲಿ ನಡೆಯಿತು. ಸಯ್ಯದ್ ಉಮರುಲ್ ಫಾರೂಖ್ ತಂಙಳ್ ಆದೂರು ಅಧ್ಯಕ್ಷತೆ ವಹಿಸಿ ಸಂಘ ಸಂಸ್ಥೆಗಳು ಅನಾಥ ಹಾಗೂ ನಿರ್ಗತಿಕರತ್ತ ಗಮನಹರಿಸಬೇಕು ಬಡ ವಿಧ್ಯಾರ್ಥಿಗಳ ಧಾರ್ಮಿಕ ಹಾಗೂ ಲೌಕಿಕ ವಿದ್ಯೆ ಕಲಿಯುವ, ಬಡ ಹಾಗೂ ಅನಾಥ ಹೆಣ್ಣು ಮಕ್ಕಳ ವಿವಾಹಗಳಿಗೆ ಸಹಾಯಧನ ನೀಡುತ್ತಿರುವ ದಾರುರ್ರಶಾದ್ ಟ್ರಸ್ಟ್ ಮಾದರಿಯಾಗಲಿ ಎಂದು ಶುಭಹಾರೈಸಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಪಿ.ಕೆ.ಅಬ್ದುಲ್ ರಝಾಕ್ ಫೈಝಿ ನಂದಾವರ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ. ಹನೀಫ್ ಮದನಿ ಕಡಂಬು, ಕೋಶಾಧಿಕಾರಿಯಾಗಿ ಮಹಮ್ಮದ್ ಫೈರೋಝ್ ಮತ್ತು ಹನ್ನೊಂದು ಸದಸ್ಯರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಹನೀಫ್ ಮದನಿ ಕಡಂಬು ಸ್ವಾಗತಿಸಿ ವಂಧಿಸಿದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಪಾಣೆಮಂಗಳೂರು: ದಾರುರ್ರಶಾದ್ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ"