ಬಂಟ್ವಾಳ: ಸಾಹಿತ್ಯಗಳು ಸಮಾಜದಲ್ಲಿ ಸಾಮರಸ್ಯತೆಯನ್ನು ಸೃಷ್ಟಿಸಬೇಕು ಅಂತಹ ಸಾಹಿತ್ಯಗಳಿಂದ ಶಾಂತಿ ಮತ್ತು ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯವೆಂದು ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಮೋಂಟುಗೋಳಿ ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣದ ಪತ್ರಿಕೆ ಅಕ್ಷರ ಇ ಮ್ಯಾಗಝಿನ್ ಇದರ ಪತ್ರಿಕಾ ಬಳಗಕ್ಕೆ ಅಧಿಕೃತ ಚಾಲನೆ ನೀಡಿ ಮಾತನಾಡಿದರು.
ಸಂಪಾದಕ ಬಿ.ಎಸ್ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು.
ರಶೀದ್ ವಿಟ್ಲ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಶಾಕಿರ್ ಎಂ ಎಸ್ ಇ ಶುಭ ಹಾರೈಸಿದರು. ಅಕ್ಷರ ಪತ್ರಿಕಾ ಬಳಗದ ಲುಕ್ಮಾನ್ ಅಡ್ಯಾರ್,ಬಾಪು ಅಮ್ಮೆಂಬಳ,ನಿಝಾಂ ಮಂಚಿ,ಪಿ.ಕೆ.ಎಂ ಹನೀಫ್,ನಾಸಿರ್ ಸಜಿಪ ಮುಂತಾದವರು ಉಪಸ್ಥಿತರಿದ್ದರು. ಉಪಸಂಪಾದಕ ಎಂ.ಎಂ ಮಹ್ ರೂಫ್ ಆತೂರು ಸ್ವಾಗತಿಸಿ ವಂದಿಸಿದರು
Be the first to comment on "ಸಾಹಿತ್ಯಗಳು ಸಮಾಜದಲ್ಲಿ ಸಾಮರಸ್ಯತೆಯನ್ನು ಸೃಷ್ಟಿಸಬೇಕು: ಕೆ.ಎಂ.ಮೋಂಟುಗೋಳಿ"