ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದಲ್ಲಿ ನವೆಂಬರ್ 12 ಮತ್ತು 13ರಂದು ವಿದ್ಯಾಭಾರತಿ ಕರ್ನಾಟಕ ವತಿಯಿಂದ ಪ್ರಾಂತೀಯ ಶಿಶು ಶಿಕ್ಷಣ ಸಮಾವೇಶ ನಡೆಯಿತು.
ಶಿಕ್ಷಣ ಕ್ಷೇತ್ರ ಪವಿತ್ರವಾದುದು. ಪ್ರತಿಯೊಂದು ಮಗುವು ದೇವರ ಅಂಶ ಎಂಬ ಕಲ್ಪನೆ ನಮ್ಮದು. ಶಿಶುಗಳು ಜೀವಂತ ದೇವರು. ಪುಟಾಣಿಗಳಿಗೆ ಚಟುವಟಿಕೆ ಆಧಾರಿತ ಶಿಕ್ಷಣ ನೀಡುವುದು ಅಗತ್ಯ.ಪುಟಾಣಿಗಳಿಗೆಸ್ವತಂತ್ರ ಚಿಂತನೆಗೆ ಅವಕಾಶನೀಡಬೇಕು ಎಂದು ಡಾ. ಪ್ರಭಾಕರ ಭಟ್ ಕಲ್ಲಡ್ಕ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಸಮಾರೋಪ ಭಾಷಣದಲ್ಲಿ ತಿಳಿಸಿದರು.
ಜಿ.ಆರ್. ಜಗದೀಶ ಸಹ ಸಂಘಟನಾ ಕಾರ್‍ಯದರ್ಶಿ, ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರ ಇವರು ಮನೆಯೇ ಮೊದಲ ಪಾಠ ಶಾಲೆ, ಹೊ.ರಾ ರಾಜಾರಾಮ ಪಾಂತ ಕಾರ್‍ಯಕಾರಿಣಿ ಸದಸ್ಯರು, ಶಿಶು ಶಿಕ್ಷಣ ಏಕೆ?, ಅನ್ನಪೂರ್ಣ ಶಿವಮೊಗ್ಗ, ಶಿಶುಶಿಕ್ಷಣದ ಒಳ ಹೊರವು , ಭಗಿನಿ ಗಂಗಾ, ಚಟುವಟಿಕೆ-ಶಿಕ್ಷಣ-ಸಂಸ್ಕಾರ, ತಾರಾ ದೊಮ್ಮಸಂದ್ರ, ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಿ ಶಿಶುಮಂದಿರ, ಭಗಿನಿ ಸಾವಿತ್ರಿ, ಕಲಿಕೆಯಲ್ಲಿ ಮಾತೃಭಾಷೆ ಮಹತ್ವ, ಹಾಗೂ ಮಗುವಿನ ಮನೆ ಅರಳಿಸುವ ಕಲೆ ಎಂಬ ವಿಷಯಗಳ ಬಗ್ಗೆ ಅವಧಿಗಳನ್ನು ನಡೆಸಿಕೊಟ್ಟರು.
ವಿದ್ಯಾಕೇಂದ್ರದ ಅಧ್ಯಕ್ಷರು ಬಿ.ನಾರಾಯಣ ಸೋಮಯಾಜಿ ಪ್ರದರ್ಶಿನಿಯನ್ನು ಉದ್ಘಾಟಿಸಿದರು. ವಿದ್ಯಾಭಾರತಿ ಪ್ರಾಂತ ಕಾರ್‍ಯದರ್ಶಿ ವಸಂತ ಮಾಧವ, ಅಧ್ಯಕ್ಷರು ಪ್ರೊ. ಎಂ.ಜೆ. ಸುಂದರರಾಮ್, ಹಾಗೂ ವಿದ್ಯಾಭಾರತಿಯ ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು. ಒಟ್ಟು 16 ಜಿಲ್ಲೆಗಳಿಂದ 208 ಪ್ರತಿನಿಧಿಗಳು ಭಾಗವಹಿಸಿದ್ದರು. ಶಿಶುಮಂದಿರದ ಪುಟಾಣಿಗಳಿಂದ ದೈನಂದಿನ ಚಟುವಟಿಕೆಗಳ ಪ್ರಾತ್ಯಾಕ್ಷತೆ, ಶಿಶುಮಂದಿರ, ಪೂರ್ವಗುರುಕುಲ ಹಾಗೂ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್‍ಯಕ್ರಮಗಳ ಪ್ರದರ್ಶನ ನೀಡಲಾಯಿತು.
Be the first to comment on "ಸ್ವತಂತ್ರ ಚಿಂತನೆಗೆ ಅವಕಾಶವಿರಲಿ: ಡಾ.ಪ್ರಭಾಕರ ಭಟ್ ಕಲ್ಲಡ್ಕ"