ಬಂಟ್ವಾಳ: ಬಿ.ಸಿ.ರೋಡಿನಲ್ಲಿರುವ ತೋಟಗಾರಿಕಾ ಇಲಾಖಾ ಕಚೇರಿಯೊಳಗೆ ಮಂಗಳವಾರ ವಿಶೇಷ ಅತಿಥಿ ಆಗಮನ.
ನಾಗರಹಾವೊಂದು ಕಚೇರಿಯೊಳಗೆ ಸುತ್ತಾಡಿ, ಕಡತಗಳಲ್ಲಿ ಹೊರಳಾಡಿ, ಸಹಾಯಕ ನಿರ್ದೇಶಕ ದಿನೇಶ್ ಆಚಾರ್ಯ ಕುಳಿತುಕೊಳ್ಳುವ ಕುರ್ಚಿ ಅಡಿಯಲ್ಲೇ ಓಡಾಡಿದೆ.
ನಾಗರಹಾವನ್ನು ಕಂಡು ಬೆಚ್ಚಿ ಬಿದ್ದ ಸಿಬ್ಬಂದಿಗಳು ಹೊರ ಓಡಿ ಬಂದು ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದು ಸ್ಥಳಕ್ಕೆ ಬಂದ ಅವರು ಕ್ಷಣಾರ್ಧದಲ್ಲಿ ಹಾವನ್ನು ಸೆರೆ ಹಿಡಿದು ಚಾಕಲೇಟ್ ಡಬ್ಬದಲ್ಲಿ ಬಂದಿಯಾಗಿಸಿದರು. ಡಬ್ಬದೊಳಗಿಂದಲೆ ಹೆಡೆ ಎತ್ತಿ ಬುಸುಗುಟ್ಟಿತ್ತಿದ್ದರೂ ಹಾವು ಕಂಡು ಆತಂಕಗೊಂಡಿದ್ದ ತೋಟಗಾರಿಕಾ ಇಲಾಖೆಯ ಸಿಬ್ಬಂದಿ ನಿರಾಳರಾದರು. ಬಳಿಕ ಸ್ನೇಕ್ ಕಿರಣ್ ಅರಣ್ಯ ಇಲಾಖೆಯ ಅಧಿಕಾರಿಗಳ ನೆರವು ಪಡೆದು ಹಾವನ್ನು ವಗ್ಗದ ಕೊಡ್ಯಮಲೆ ಅರಣ್ಯಕ್ಕೆ ಬಿಟ್ಟರು.
ಕೆಲ ದಿನಗಳ ಹಿಂದೆಯಷ್ಟೇ ಇದೇ ಕಚೇರಿಯಲ್ಲಿ ನಾಗರ ಹಾವು ಕಾಣಿಸಿಕೊಂಡಿತ್ತು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
Be the first to comment on "ತೋಟಗಾರಿಕಾ ಇಲಾಖೆಗೆ ನಾಗರಾಜ ವಿಸಿಟ್!"